ಚೆನ್ನೈ ಗೆಲುವಿಗೆ 179 ರನ್ಗಳ ಸವಾಲು

ಯೂಸುಫ್ ಪಠಾಣ್ ಔಟಾಗದೆ 45 ರನ್ (25ಎ, 4ಬೌ ,2ಸಿ)
ಮುಂಬೈ, ಮೇ 27: ಹನ್ನೊಂದನೇಯ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯ ಫೈನಲ್ ಪಂದ್ಯದಲ್ಲಿ ರವಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 178ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಸನ್ರೈಸರ್ಸ್ ಹೈದರಾಬಾದ್ ತಂಡ ನಾಯಕ ಕೇನ್ ವಿಲಿಯಮ್ಸನ್ 47 ರನ್(36ಎ, 5ಬೌ, 2ಸಿ) ಮತ್ತು ಯೂಸುಫ್ ಪಠಾಣ್ ( ಔಟಾಗದೆ 45) ಅವರ ಉಪಯುಕ್ತ ಬ್ಯಾಟಿಂಗ್ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಶಿಖರ್ ಧವನ್ 26ರನ್, ಶಾಕಿಬ್ ಅಲ್ ಹಸನ್ 23, ಬ್ರಾಥ್ವೈಟ್ 21 ರನ್ ಗಳಿಸಿದರು.
Next Story





