ಕೋಝಿಕ್ಕೋಡ್ ನಲ್ಲಿ ನಿಪಾಹ್ ಗೆ 22 ವರ್ಷದ ಯುವಕ ಬಲಿ

ತಿರುವನಂತಪುರಂ, ಮೇ 27: ರವಿವಾರ ಮಾರಣಾಂತಿಕ ನಿಪಾಹ್ ವೈರಸ್ ಗೆ ಕೇರಳ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ನಿಪಾಹ್ ನಿಂದ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ.
ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 22 ವರ್ಷದ ಅಬಿನ್ ಇಂದು ಮೃತಪಟ್ಟಿದ್ದಾರೆ. ಇನ್ನಿಬ್ಬರಿಗೆ ನಿಪಾಹ್ ಇರುವುದು ಖಚಿತಗೊಂಡಿದೆ.
ಬಾವಲಿಯ ಏಳು ಜಾತಿಗಳು, ಹಂದಿಯ 2 ಜಾತಿಗಳು, ಒಂದು ದನ ಹಾಗು ಒಂದು ಮೇಕೆಯ ಮಾದರಿಗಳನ್ನು ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಗೆ ಕಳುಹಿಸಲಾಗಿತ್ತು. ಆದರೆ ನಿಪಾಹ್ ಗೆ ಬಾವಲಿ ಕಾರಣ ಎನ್ನುವುದು ಪರೀಕ್ಷೆಯಲ್ಲಿ ದೃಢಪಟ್ಟಿರಲಿಲ್ಲ.
Next Story





