ಬಂಟ್ವಾಳ: ಗುಡುಗು, ಮಿಂಚು ಸಹಿತ ಭಾರೀ ಮಳೆ; ಗುಡ್ಡೆ ಜರಿದು ಕಾರಿಗೆ ಹಾನಿ

ಬಂಟ್ವಾಳ, ಮೇ 27: ವಿಟ್ಲ ಭಾಗದ ವಿವಿಧೆಡೆ ರವಿವಾರ ಸಂಜೆ ಸುರಿದ ಗುಡುಗು, ಮಿಂಚು ಸಹಿತ ಭಾರೀ ಮಳೆಗೆ ವಾಹನವೊಂದರ ಮೇಲೆ ಮಣ್ಣು ಕುಸಿದು ಬಿದ್ದ ಪರಿಣಾಮ ಹಾನಿ ಸಂಭವಿಸಿದ ಘಟನೆ ವಿಟ್ಲ-ಪುತ್ತೂರು ರಸ್ತೆಯ ಚಂದ್ರನಾಥ ಸ್ವಾಮೀ ಬಸದಿ ಬಳಿ ನಡೆದಿದೆ.
ವಿಟ್ಲ ಮುಡ್ನೂರು ಗ್ರಾಮದ ದಿನೇಶ್ ಗೌಡ ಎಂಬವರಿಗೆ ಸೇರಿದ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ರಾತ್ರಿ ನಿರಂತರವಾಗಿ ಸುರಿದ ಮಳೆಗೆ ಗುಡ್ಡೆ ಕುಸಿದು ವಾಹನದ ಮೇಲೆ ಉರುಳಿದೆ. ಇದರಿಂದ ವಾಹನಕ್ಕೆ ಹಾನಿಯಾಗಿದೆ.
ಬಂಟ್ವಾಳ ಹಾಗೂ ವಿಟ್ಲ ಪರಿಸರದಲ್ಲಿ ಸಂಜೆ 5 ಗಂಟೆಗೆ ಪ್ರಾರಂಭಗೊಂಡ ಮಳೆ ರಾತ್ರಿವರೆಗೂ ಮುಂದುವರೆದಿದೆ. ಬಂಟ್ವಾಳ ಮುಖ್ಯ ರಸ್ತೆ ಸಹಿತ ವಿಟ್ಲ ಪೇಟೆಯಲ್ಲಿ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಟ್ಲ ಭಾಗದ ಬಹುತೇಕ ಮನೆಯೊಳಗಡೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಮಿಂಚು ಸಿಡಿಲಿನ ಅಬ್ಬರಕ್ಕೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
Next Story





