ಮಂಡ್ಯ: ಮೊಸಳೆ ದಾಳಿಗೆ ವ್ಯಕ್ತಿ ಬಲಿ

ಮಂಡ್ಯ, ಮೇ 27: ಜಿಲ್ಲೆಯ ಪ್ರವಾಸಿತಾಣ ಮಳವಳ್ಳಿ ತಾಲೂಕು ಮುತ್ತತ್ತಿ ಬಳಿ ಕಾವೇರಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಬೆಂಗಳೂರಿನ ವ್ಯಕ್ತಿ ಮೊಸಳೆ ದಾಳಿಯಿಂದ ಮೃತಪಟ್ಟಿರುವ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಬೆಂಗಳೂರು ಹೆಸರುಘಟ್ಟ ಬಳಿಯ ತರಮನಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್(52) ಮೃತಪಟ್ಟವರು. ಕುಟುಂಬಸ್ಥರ ಜತೆ ಮುತ್ತತ್ತಿಗೆ ಆಗಮಿಸಿದ್ದ ಅವರು, ಸ್ನಾನ ಮಾಡಲು ನದಿಯಲ್ಲಿ ಇಳಿದಾಗ ಮೊಸಳೆ ಎಳೆದೊಯ್ದಿದೆ. ವೆಂಕಟೇಶ್ ಅವರ ಬಲ ಕೈ, ಎಡ ಕಾಲನ್ನು ಮೊಸಳೆ ಕಚ್ಚಿದ ಪರಿಣಾಮ ಕಾಲಿನ ಮೂಳೆ ತುಂಡಾಗಿದೆ. ಸಾರ್ವಜನಿಕರು ರಕ್ಷಿಸುವ ವೇಳೆಗೆ ಅವರು ಮೃತಪಟ್ಟಿದ್ದರು.
ಹಲಗೂರು ಪೊಲೀಸ್ ಠಾಣೆ ಪಿಎಸ್‍ಐ ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





