ಸ್ಲಾಪ್‌ನಿಂದ ಬಿದ್ದು ಮೃತ್ಯು
ಗಂಗೊಳ್ಳಿ, ಮೇ 27: ಹಡವು ಗ್ರಾಮದ ಅತ್ತಿಕೋಣೆ ಎಂಬಲ್ಲಿ ಮನೆಯ ಸಿಟ್‌ಔಟಿನ ಸ್ಲ್ಯಾಪ್ ಸ್ವಚ್ಛ ಮಾಡುವ ವೇಳೆ ಕೆಳಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಅತ್ತಿಕೋಣೆಯ ಮೆಲ್ವಿನ್ ಒಲಿವೇರಾ(49) ಎಂದು ಗುರುತಿಸ ಲಾಗಿದೆ. ಇವರು ಮೇ 15ರಂದು ಮನೆಯ ಸ್ಪ್ಲಾಪ್ ಸ್ವಚ್ಛ ಮಾಡುತ್ತಿರುವಾಗ ಆಕಸ್ಮಿಕವಾಗಿ ಸುಮಾರು 8 ಅಡಿ ಮೇಲಿನಿಂದ ಕೆಳಗೆ ಬಿದ್ದ ಗಾಯಗೊಂಡಿ ದ್ದರು. ತೀವ್ರವಾಗಿ ಗಾಯಗೊಂಡಿದ್ದ ಇವರು ಮೇ 26ರಂದು ರಾತ್ರಿ 11.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿ ದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





