ಉಡುಪಿ: ಖಾಸಗಿ ಬಸ್ ಬಂದ್ ಇಲ್ಲ
ಉಡುಪಿ, ಮೇ 27: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ನಾಳಿನ ಕರ್ನಾಟಕ ಬಂದ್‌ಗೆ ಖಾಸಗಿ ಹಾಗೂ ಸಿಟಿ ಬಸ್ ಮಾಲಕರ ಸಂಘದಿಂದ ಬೆಂಬಲ ವ್ಯಕ್ತಪಡಿಸಿಲ್ಲ ಎಂದು ತಿಳಿದು ಬಂದಿದೆ.
ಆದುದರಿಂದ ಉಡುಪಿಯಲ್ಲಿ ಖಾಸಗಿ ಬಸ್ ಸೇವೆಯು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಬಂದ್ ಬೆಂಬಲಿಸಿ ಸೇವೆ ನಿಲ್ಲಿಸುವ ಬಗ್ಗೆ ಸಿಟಿ ಮತ್ತು ಸರ್ವೀಸ್ ಬಸ್ ಮಾಲೀಕರ ಸಂಘದ ವತಿಯಿಂದ ಈವರೆಗೆ ಯಾವುದೇ ಅಂತಿಮ ನಿರ್ಣಯ ಕೈಗೊಂಡಿಲ್ಲ. ಕೆಲ ಬಸ್ ಮಾಲಕರು ಸ್ವಯಂ ಪ್ರೇರಿತ ರಾಗಿ ಬಸ್ ಸೇವೆ ನಿಲ್ಲಿಸುವ ಸಾಧ್ಯತೆ ಇರಬಹುದೆಂದು ಮೂಲಗಳು ತಿಳಿಸಿವೆ.
Next Story





