ಎಚ್.ಕೆ.ಎ. ಬಾವಾ ಮೆಮೋರಿಯಲ್ ಟ್ರಸ್ಟ್‌ನಿಂದ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ
ಮಂಗಳೂರು, ಮೇ 27: ನಗರದ ಗೂಡ್ಸ್‌ಶೆಡ್ ರಸ್ತೆಯಲ್ಲಿರುವ ಬಾವಾ ಚೇಂಬರ್ಸ್ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಎಚ್.ಕೆ.ಎ. ಬಾವಾ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಬಡ ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮವು ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಹಾಜಿ ಕೆ.ಖಾಲಿದ್ ಬಾವಾ, ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಅಬ್ದುರ್ರಶೀದ್, ಕಾರ್ಯದರ್ಶಿ ನಿಸಾರ್ ಫಕೀರ್ ಮುಹಮ್ಮದ್, ಟ್ರಸ್ಟಿಗಳಾದ ಸಲಾಹುದ್ದೀನ್ ಘಾಝಿ, ಎಂ.ಅಬ್ದುರ್ರಹೀಂ ಉಪಸ್ಥಿತರಿದ್ದರು.
ಎಚ್.ಕೆ.ಎ. ಬಾವಾ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಬಡ ಹೆಣ್ಣು ಮಕ್ಕಳಿಗೆ ಉಳ್ಳಾಲ ಮಾಸ್ತಿಕಟ್ಟೆಯಲ್ಲಿರುವ ಟೈಲರಿಂಗ್ ಸೆಂಟರ್‌ನಲ್ಲಿ ಹೊಲಿಗೆ ತರಬೇತಿಯನ್ನು ನೀಡಲಾಗುತ್ತಿದೆ. ನಾಲ್ಕು ತಿಂಗಳ ಈ ಕೋರ್ಸ್‌ನ ಕೊನೆಯಲ್ಲಿ ಆಯ್ದ ಬಡ ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಈ ವರ್ಷ ಸುಮಾರು 30 ಮಂದಿ ಬಡ ಹೆಣ್ಣು ಮಕ್ಕಳು ಕೋರ್ಸ್‌ನ ಪ್ರಯೋಜನವನ್ನು ಪಡೆದುಕೊಂಡಿದ್ದು, ಆಯ್ದ ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ನಿಸಾರ್ ಫಕೀರ್ ಮುಹಮ್ಮದ್ ತಿಳಿಸಿದ್ದಾರೆ.







