Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಂಘರ್ಷ ಕಲಿಸಿದ ಸಂಸ್ಕೃತಿ

ಸಂಘರ್ಷ ಕಲಿಸಿದ ಸಂಸ್ಕೃತಿ

ವಾರ್ತಾಭಾರತಿವಾರ್ತಾಭಾರತಿ27 May 2018 11:45 PM IST
share
ಸಂಘರ್ಷ ಕಲಿಸಿದ ಸಂಸ್ಕೃತಿ

ತಿರುವಾಂಕೂರು ಸಂಸ್ಥಾನದಲ್ಲಿ ಕುಲತಾರತಮ್ಯ, ದಮನ, ಅಸ್ಪಶ್ಯತೆ ಕೆಳವರ್ಗಗಳ ಜನರನ್ನು ಎಷ್ಟೋ ಕಷ್ಟಗಳಿಗೆ ಗುರಿ ಮಾಡಿದವು. ಬಹುಸಂಖ್ಯಾತ ಜಾತಿಗಳಿಗೆ ಪಾಠಶಾಲೆಗಳಲ್ಲಿ ಪ್ರವೇಶ ಇಲ್ಲ. ಉದ್ಯೋಗಗಳಲ್ಲಿ ಸ್ಥಾನವಿಲ್ಲ. ಮೇಲ್ಜಾತಿಗಳು ನಡೆದ ದಾರಿಯಲ್ಲಿ ನಡೆಯುವುದಕ್ಕೆ ಅವಕಾಶ ಇಲ್ಲ. ಇದರಲ್ಲಿ ಹೆಚ್ಚಾಗಿ ತಾರತಮ್ಯಕ್ಕೆ, ದಮನಕ್ಕೆ ಗುರಿಯಾಗಿದ್ದು ನಾಡಾರ್ಗಳೆ.

‘ಹಿಂದೂ ಧರ್ಮದೊಂದಿಗೆ ನಮಗೆ ಯಾವುದೇ ಹೋಲಿಕೆಯೂ ಇಲ್ಲ. ನಾವು ಹಿಂದೂಗಳು ಅನುಸರಿಸುವ ಪೂಜಾ ಪದ್ಧತಿಗಳನ್ನೂ ಇತರ ವಿಧಾನಗಳನ್ನು ಅನುಸರಿಸುವುದಿಲ್ಲ. ನಮ್ಮ ದೇವ-ದೇವತೆಗಳೆಲ್ಲಾ ಕನ್ನಡಿಯೇ. ಅಂದರೆ ಕನ್ನಡಿಗೆ ಪೂಜೆ ಮಾಡುತ್ತೇವೆ. ದೇವಾಲಯದಲ್ಲಿ ತೆಂಗಿನಕಾಯಿ ಸಹ ಒಡೆಯೆವು. ನಮ್ಮ ವಿವಾಹ ಪದ್ಧತಿಗಳು ಬೇರೆ. ಮರಣಾನಂತರ ಪಾಲಿಸುವ ಸಂಪ್ರದಾಯಗಳು ಬೇರೆ. ಆದ್ದರಿಂದಲೇ ನಮ್ಮನ್ನು ಬೇರೆ ಮತ ಎಂದು ಘೋಷಿಸಬೇಕಾಗಿ ಕೋರುತ್ತೇವೆ’’ ಎಂದು ‘ಅಯ್ಯವಾಜಿ’ ಸಾಮಾಜಿಕ ವರ್ಗ ವಿನಂತಿಸುತ್ತಿದೆ. ಜಯಲಲಿತಾ ಮುಖ್ಯಮಂತ್ರಿ ಆಗಿದ್ದಾಗ, ಕನ್ಯಾ ಕುಮಾರಿಯಲ್ಲಿರುವ ಪ್ರಧಾನ ದೇಗುಲವನ್ನು ಸಂದರ್ಶಿಸಿದ ಸಮಯದಲ್ಲಿ ತಾವು ಹೀಗೆ ವಿನಂತಿ ಮಾಡಿದೆವು ಎಂದು, ಆಕೆ ಸಾನುಕೂಲವಾಗಿ ಸ್ಪಂದಿಸಿದರು ಎಂದು, ಆದರೆ ಆಕೆಯ ಸಾವಿನೊಂದಿಗೆ ತಮ್ಮ ಬೇಡಿಕೆ ಎಲ್ಲಿ ಹಾಸಿದ ಕಂಬಳಿ ಅಲ್ಲೇ ಎಂಬ ವಿಧದಲ್ಲಿ ಉಳಿದಿದೆ ಎಂದು, ಅಯ್ಯಾವಾಜಿಗಳ ಅಧಿಪತಿ ಬಾಲಪ್ರಜಾಪತಿ ಅಡಿಕಲ್ ಇತ್ತೀಚೆಗೆ ಪತ್ರಕರ್ತರ ಎದುರು ಮೊರೆ ಇಟ್ಟರು.

 ಕರ್ನಾಟಕದಲ್ಲಿ ಲಿಂಗಾಯತರನ್ನು ಪ್ರತ್ಯೇಕ ಮತ ಎಂದು ಗುರ್ತಿಸುತ್ತಾ ಹಿಂದಿನ ಸರಕಾರ ತಗೊಂಡ ತೀರ್ಮಾನದ ಬಳಿಕ ಇವರ ಬೇಡಿಕೆಗೆ ಪ್ರಾಧಾನ್ಯ ಹೆಚ್ಚಿದೆ. ಆದರೆ ಇದು ಹೊಸ ಬೇಡಿಕೆಯಲ್ಲ. ಅಯ್ಯಿವಾಜಿ ಸಾಮಾಜಿಕ ವರ್ಗ ಎಲ್ಲಿಯದು? ಹೇಗೆ ಹುಟ್ಟಿಕೊಂಡಿತು ಎಂಬ ಪ್ರಶ್ನೆಗಳು ಸಂದರ್ಭೋಚಿತ ಸುಮಾರು 200 ವರ್ಷಗಳ ಕೆಳಗೆ ತಿರುವಾಂಕೂರು ಸಂಸ್ಥಾನದಲ್ಲಿ ಒಂದು ಸಾಮಾಜಿಕ ಆಂದೋಲನ ಮೈದಳೆಯಿತು. ಆ ಆಂದೋಲನವೇ ಆನಂತರ ಒಂದು ಜೀವನ ವಿಧಾನ ಆಯಿತು. ಆ ಚಳವಳಿಯ ಸೃಷ್ಟಿಕರ್ತನನ್ನು ದೇವರ ಅವತಾರ ಎಂದು ಭಾವಿಸಿದರು. ಆ ಕಾಲದ ಹತ್ತಿಕ್ಕುವಿಕೆ, ತಾರತಮ್ಯಗಳಿಗೆ ವಿರುದ್ಧವಾಗಿ ಹೊರಹೊಮ್ಮಿದ ಪ್ರತಿರೋಧ ಒಂದು ಮತ ಸಂಪ್ರದಾಯವಾಗಿ ಅವತರಿಸಿತು. ಒಂದು ಸಾಮಾಜಿಕ ಹೋರಾಟ ಮತವಾಗಿ ರೂಪುಗೊಳ್ಳುವುದು ಹೇಗೆ ನಡೆಯಿತೋ ಊಹಿಸುವುದಕ್ಕೆ ಇದೊಂದು ಉದಾಹರಣೆ. ಮೇಲಾಗಿ ಇದು ಆಧುನಿಕ ಕಾಲದಲ್ಲಿ ನಡೆದಿದ್ದು ವಿಶೇಷ.

ಅಯ್ಯಾ ವೈಕುಂದಾರ್

ತಿರುವಾಂಕೂರು ಸಂಸ್ಥಾನದಲ್ಲಿ ಕುಲತಾರತಮ್ಯ, ದಮನ, ಅಸ್ಪಶ್ಯತೆ ಕೆಳವರ್ಗಗಳ ಜನರನ್ನು ಎಷ್ಟೋ ಕಷ್ಟಗಳಿಗೆ ಗುರಿ ಮಾಡಿದವು. ಬಹುಸಂಖ್ಯಾತ ಜಾತಿಗಳಿಗೆ ಪಾಠಶಾಲೆಗಳಲ್ಲಿ ಪ್ರವೇಶ ಇಲ್ಲ. ಉದ್ಯೋಗಗಳಲ್ಲಿ ಸ್ಥಾನವಿಲ್ಲ. ಮೇಲ್ಜಾತಿಗಳು ನಡೆದ ದಾರಿಯಲ್ಲಿ ನಡೆಯುವುದಕ್ಕೆ ಅವಕಾಶ ಇಲ್ಲ. ಇದರಲ್ಲಿ ಹೆಚ್ಚಾಗಿ ತಾರತಮ್ಯಕ್ಕೆ, ದಮನಕ್ಕೆ ಗುರಿಯಾಗಿದ್ದು ನಾಡಾರ್‌ಗಳೆ. ನಾಡಾರ್‌ಗಳ ಪ್ರಧಾನ ವೃತ್ತಿ ಹೆಂಡ ಇಳಿಸುವುದು. ವ್ಯವಸಾಯ, ಇತರ ನಿರ್ಮಾಣ ಕೆಲಸಗಳಲ್ಲೂ ಇವರ ಸಂಬಂಧ ಹೆಚ್ಚು. ಇವರಿಂದ ಸರಕಾರಿ ಕಟ್ಟಡಗಳು, ದೇವಾಲಯಗಳ ನಿರ್ಮಾಣ ಮಾಡಿಸುತ್ತಿದ್ದರು. ಆದರೆ ಸಂಬಳವಿಲ್ಲ. ಸ್ಪಷ್ಟವಾಗಿ ಹೇಳಬೇಕೆಂದರೆ ಬಿಟ್ಟಿ ಚಾಕರಿ.

 ಇನ್ನು ಸಂಸ್ಥಾನಾಧೀಶರು ಇವರ ಮೇಲೆ ಅತಿಯಾಗಿ ತೆರಿಗೆಗಳನ್ನು ವಿಧಿಸುತ್ತಿದ್ದರೆಂದು ಚರಿತ್ರೆ ಹೇಳುತ್ತದೆ. ಸುಮಾರು 300 ವಿಧದ ತೆರಿಗೆಗಳು. ಈ ತೆರಿಗೆಗಳಲ್ಲಿ ಪುರುಷಾಂತರಂ ಎಂಬ ತೆರಿಗೆ ತೀವ್ರವಾದುದು. ತಾತಮುತ್ತಾತರ ಆಸ್ತಿಯಲ್ಲಿ 40% ಬೆಲೆ ಬಾಳುವ ಹಣವನ್ನು, ಆಸ್ತಿಯನ್ನು ಸಂಸ್ಥಾನಕ್ಕೆ ಒಪ್ಪಿಸಬೇಕು. ಪ್ರಾಯಶ್ಚಿತ್ತದ ಹೆಸರಿನಲ್ಲಿ ಮತ್ತೊಂದು ತೆರಿಗೆ. ಯಾರಾದರೂ ಒಬ್ಬ ಪುರುಷ ಇತರ ಪ್ರಾಂತಗಳಿಗೆ ದೇಶಗಳಿಗೆ ಹೋದರೆ ತೆರಿಗೆ. ಮನೆ ಕಟ್ಟಿಕೊಂಡರೂ, ಗುಡಿಸಲು ಹಾಕಿಕೊಂಡರೂ ತೆರಿಗೆ. ಕೊನೆಗೆ ಮರಗಳನ್ನು ಬೆಳೆಸಿದರೆ, ಒಂದೊಂದು ವಿಧದ ಮರಕ್ಕೆ ಒಂದೊಂದು ವಿಧದ ತೆರಿಗೆ ವಿಧಿಸುವರು. ಹೊಸ ಬಟ್ಟೆಗಳು, ನಗಗಳು, ತಲೆರುಮಾಲು ಧರಿಸಿದರೂ, ಕೊಡೆ ಹಿಡಿದರೂ, ಮದುವೆ ಮೆರವಣಿಗೆ ಮಾಡಿದರೂ ತೆರಿಗೆ ಸಲ್ಲಿಸಲೇಬೇಕು. ಮದುವೆಯಾದರೆ ತಾಳಿ ತೆರಿಗೆ, ದನಗಳನ್ನು, ಮೇಕೆಗಳನ್ನು ಕೊನೆಗೆ ನಾಯಿಯಂಥ ಪ್ರಾಣಿಗಳನ್ನು ಸಾಕಿಕೊಂಡರೂ ತೆರಿಗೆ. ಗಾಣ ಆಡಿಸುವವರ ಮೇಲೂ ತೆರಿಗೆ. ದೋಣಿ ನಡೆಸುವವರಿಗೆ ದೋಣಿ ತೆರಿಗೆ. ಮೀನು ಹಿಡಿಯುವವರಿಗೆ ಬಲೆ ತೆರಿಗೆ, ಎತ್ತಿನ ಬಂಡಿ ತೆರಿಗೆ, ಕೊಡಲಿ ತೆರಿಗೆ, ಸುತ್ತಿಗೆ ತೆರಿಗೆ, ಹಾರೆೆ ಮೇಲೆ ಕೂಡಾ ತೆರಿಗೆ ವಿಧಿಸುವರು. ಅವುಗಳ ಭಾರದಿಂದ ಜನ ವಿಲವಿಲ ಒದ್ದಾಡಿ ಹೋಗುತ್ತಿದ್ದರು. ಘೋರವಾದ ವಿಷಯ ಹೆಂಗಸರ ಎದೆಯ ಮೇಲೆ ಯಾವ ಆಚ್ಛಾದನ ಇರಕೂಡದು. ಒಂದು ವೇಳೆ ಎದೆ ಮೇಲೆ ವಸ್ತ್ರವನ್ನು ಧರಿಸಿದ್ದಾದರೆ ತೆರಿಗೆ ಸಲ್ಲಿಸಬೇಕಾದ ದಾರುಣ ಪರಿಸ್ಥಿತಿ. ಹೆಂಗಸರು ಅರೆನಗ್ನರಾಗಿ ಕುಡಿವ ನೀರಿನ ಬಿಂದಿಗೆಗಳನ್ನು ನೆತ್ತಿಮೇಲೆ ಇಟ್ಟುಕೊಂಡು ತಂದುಕೊಳ್ಳಬೇಕು. ಹಾಗೆ ಬಿಂದಿಗೆಯನ್ನು ಹೊತ್ತು ತರುತ್ತಿರುವಾಗ ಎರಡೂ ಕೈಗಳನ್ನು ಮೇಲೆತ್ತಿಕೊಂಡಿರಬೇಕು. ಸ್ತನದಳಪ್ರಮಾಣವನ್ನು ಆಧರಿಸಿ ತೆರಿಗೆಗಳನ್ನು ಸಲ್ಲಿಸಬೇಕಾಗುತ್ತಿತ್ತು. ಹೆಂಗಸರು ತೆರಿಗೆ ಸಲ್ಲಿಸಲಾರದ ಸ್ಥಿತಿಯಲ್ಲಿದ್ದರೆ ಅಧಿಕಾರಯುತವಾಗಿ ಅವರ ಮೇಲೆ ಅತ್ಯಾಚಾರ ಮಾಡುವ ನೀಚ ಪದ್ಧತಿಗಳಿದ್ದವು. ಇವೆಲ್ಲವುಗಳಿಂದಲೂ ಸ್ತ್ರೀ ಕುಲದಲ್ಲಿ ಕೊನೆ ಇಲ್ಲದ ಆಕ್ರೋಶ ನಿಕ್ಷಿಪ್ತವಾಗಿತ್ತು.

 ತೆರಿಗೆಗಳನ್ನು ಸಲ್ಲಿಸದೇ ಹೋದರೆ ಘೋರವಾದ ಶಿಕ್ಷೆಗಳ ಜಾರಿ ಮಾಡುವರು. ಆದರೂ ಸರಕಾರಿ ಭೂಮಿಗಳನ್ನು, ದೇವಾಲಯ ಭೂಮಿಗಳನ್ನು ಇವರೇ ಉಚಿತವಾಗಿ ಸಾಗುವಳಿ ಮಾಡಬೇಕು. ಹಬ್ಬಗಳಲ್ಲಿ ರಾಜ ಕುಟುಂಬಗಳಿಗೂ, ಅಧಿಕಾರಿಗಳಿಗೂ ಕೋಳಿ, ಮೊಟ್ಟೆ, ಹಣ್ಣು, ತರಕಾರಿ, ಅಡುಗೆ ಪದಾರ್ಥಗಳನ್ನು ಒದಗಿಸಬೇಕು. ಆರ್ಥಿಕ ಕಟ್ಟುಪಾಡುಗಳು, ನಿಷೇಧಗಳು, ತೆರಿಗೆಗಳು, ಸಾಮಾಜಿಕ ದಮನ ಅತ್ಯಾಚಾರಗಳು ನಡೆಸುತ್ತಲೇ ಅಗ್ರಕುಲಗಳು ಇವರನ್ನು ಮತೀಯವಾಗಿ ಬಹಿಷ್ಕರಿಸುವ ಕೆಲಸ ಮಾಡಿದವು. ಅಗ್ರಕುಲಗಳ ದೇಗುಲಗಳಲ್ಲಿ ಇವರಿಗೆ ಪ್ರವೇಶ ಇಲ್ಲ. ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಪೂಜಿಸುವುದಕ್ಕೆ ಇವರು ಅಯೋಗ್ಯರು. ಅವರು ಅಗ್ರಕುಲಗಳ ದೇವರು. ಕೆಳಜಾತಿಗಳಿಗೋಸ್ಕರ ವೀರಭದ್ರ, ಸುಧಾಲಯ ಮದನ್, ಇರುಳನ್, ಮುತ್ತು ರಾಮನ್, ಭದ್ರಕಾಳಿಯಂಥ ದೈವಗಳನ್ನೇ ಇವರು ಪೂಜಿಸಬೇಕು.

 ಇಂತಹ ಹಿನ್ನೆಲೆಯಲ್ಲೇ 1809ರಲ್ಲಿ ಆ ಸಂಸ್ಥಾನದಲ್ಲಿನ ತಾಮರಕ್ಕುಲಂ ಎಂಬ ಹಳ್ಳಿಯಲ್ಲಿ ಪೊನ್ನು ನಾಡಾರ್ ವೆಯ್ಯಲಾರ್ ಅಮ್ಮಾಳ್‌ಗೆ ಒಬ್ಬ ಮಗ ಹುಟ್ಟಿದನು. ಮೊದಲು ಮುಡಿಪೂಡುಂ ಪೆರುಮಾಳ್ ಎಂದು ಆತನಿಗೆ ನಾಮಕರಣ ಮಾಡಿದರು. ಅದರರ್ಥ ಕಿರೀಟಧಾರಿ ಪ್ರಭು- ಆದರೆ ಅಗ್ರಕುಲಗಳು ಅದಕ್ಕೂ ಸಿಟ್ಟಾದವು. ಕೊನೆಗೆ ಹೆತ್ತವರು ಮಗನ ಹೆಸರನ್ನು ಮುತ್ತುಕುಟ್ಟಿ ಎಂದು ಬದಲಾಯಿಸಿದರು.

 ಮುತ್ತಿಕುಟ್ಟಿ 22 ವರ್ಷಗಳವರೆಗೆ ಸಾಮಾನ್ಯ ಬದುಕನ್ನೇ ಬದುಕಿದರು. ಮನೆ ತೆರಿಗೆಗಳಲ್ಲಿ ಇತರ ಕುಲಕಸುಬುಗಳಲ್ಲಿ ಹೆತ್ತವರಿಗೆ ಸಹಾಯವಾಗಿ ನಿಂತರು. ಆಗಲೇ ತೀವ್ರ ಅನಾರೋಗ್ಯಕ್ಕೆ ಗುರಿಯಾದರು. ಹಳ್ಳಿಯಲ್ಲಿರುವ ವೈದ್ಯರು, ಹತ್ತಿರದ ಪಟ್ಟಣಗಳಲ್ಲಿನ ವೈದ್ಯರು ಮಾಡಿದ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೆಲವರ ಸಲಹೆಯ ಮೇರೆಗೆ ತನ್ನ ಮಗನನ್ನು ತಿರುಚೆಂದೂರಿನಲ್ಲಿನ ದೇಗುಲಕ್ಕೆ ಕರೆದೊಯ್ದಳು ತಾಯಿ ಅಲ್ಲಿಗೆ ಹೋದ ಬಳಿಕ ಹತ್ತಿರದ ಸಮುದ್ರದೊಳಗೆ ಮುತ್ತುಕುಟ್ಟಿ ಓಟಕ್ಕಿತ್ತನು. ಎತ್ತ ಹೋದನೋ ತಿಳಿಯದು. 3 ದಿನಗಳ ಬಳಿಕ ಮುತ್ತುಕುಟ್ಟಿ ಪ್ರತ್ಯಕ್ಷವಾದನು. ಯಾವುದೋ ದೈವಲೀಲೆಯಿಂದ ಹೀಗೆ ನಡೆದಿದೆ ಎಂದು ಹೆತ್ತವರೂ,ಬಂಧುಗಳು ಭಾವಿಸಿದರು. ಆತ ತನ್ನ ಹಳ್ಳಿಗೆ ತೆರಳಿದನು. ದಾರಿಯಲ್ಲಿ ಎಷ್ಟೋ ಜನರ ಆರೋಗ್ಯವನ್ನು ಸುಧಾರಣೆ ಮಾಡಿದರೆಂದು ಆತನ ಜೀವನ ಚರಿತ್ರೆಯಲ್ಲಿದೆ.

ಸಾಮಾಜಿಕ ಸಂಶೋಧಕರು ಆತನನ್ನು ಮತ್ತೊಂದು ವಿಧವಾಗಿ ವಿಶ್ಲೇಷಿಸಿದ್ದಾರೆ. ಆ ಬಳಿಕ ಆತನ ಹೆಸರು ಅಯ್ಯಾ ವೈಕುಂದಾರ್ ಆಗಿ ಬದಲಾಯಿತು. ಜನರಲ್ಲಿ ತನ್ನ ಸೇವೆಗಳ ಮೂಲಕ ಪ್ರವಚನಗಳ ಮೂಲಕ ಒಳ್ಳೆಯ ಹೆಸರು ಸಂಪಾದಿಸಿದರು. ಅದುವರೆಗೆ ಮುಂದುವರಿಯುತ್ತಿದ್ದ ಶೋಷಣೆ, ತಾರತ ಮ್ಯಗಳ ಮೇಲೆ ಜನರನ್ನು ಜಾಗೃತಗೊಳಿಸುವ ಕಾರ್ಯಕ್ರಮಕ್ಕೆ ಆತ ಮುಂದಾದರು.

ಇದರಿಂದ ಅಗ್ರಜಾತಿಗಳವರು ಸಂಸ್ಥಾನಕ್ಕೆ ಎಷ್ಟೋ ದೂರುಗಳನ್ನು ಮಾಡಿದರು. ಜನರನ್ನು ಕೆರಳಿಸುತ್ತಿದ್ದಾನೆಂದು , ಆಡಳಿತವನ್ನು ಬೀಳಿಸಬೇಕೆಂದು ಪ್ರೇರೇಪಿಸುತ್ತಿದ್ದಾನೆಂದು ಅರೆದು ಸುರಿದರು. ಇದರಿಂದಾಗಿ ಅನಿವಾರ್ಯವಾಗಿ ಸಂಸ್ಥಾನಾಧೀಶರು ಅಯ್ಯವೈಕುಂದಾರ್‌ನನ್ನು ಅರೆಸ್ಟ್ ಮಾಡುವುದಕ್ಕೆ ಸೈನ್ಯವನ್ನು ಕಳುಹಿಸಿದರು. ಆದರೆ ಸಾವಿರಾರು ಜನ ಪ್ರಜೆಗಳು ಅರೆಸ್ಟ್ ಮಾಡುವುದಕ್ಕೆ ಬಿಡೆವು ಎಂದು ರಕ್ಷಾ ಕವಚವಾಗಿ ನಿಂತರು. ಆದರೆ ಅಯ್ಯಾ ವೈಕುಂದಾರ್ ಜನರ ಮನವೊಲಿಸಿದ್ದರಿಂದ ಸೈನ್ಯಕ್ಕೆ ದಾರಿ ಕೊಟ್ಟರು.

ಸೈನ್ಯ ಆತನನ್ನು ಅರೆಸ್ಟ್ ಮಾಡಿ ಸುಚೀಂದ್ರಂನಲ್ಲಿನ ರಾಜನ ಎದುರು ಹಾಜರು ಪಡಿಸಿದರು. ರಾಜ ಆತನನ್ನು ಪರೀಕ್ಷಿಸಬಯಸಿ ಮಾಯೆಗಳು, ತಂತ್ರಗಳನ್ನು ಪ್ರದರ್ಶಿಸಬೇಕೆಂದು ಆಜ್ಞಾಪಿಸಿದನು. ಇದಕ್ಕೆ ಅಯ್ಯೆ ವೈಕುಂದಾರ್ ನಿರಾಕರಿಸುತ್ತಾರೆ. ಹಾಗಾಗಿ ಜೈಲು ಶಿಕ್ಷೆ ವಿಧಿಸಿದರು. 2ದಿನಗಳ ಬಳಿಕ ರಾಜಧಾನಿ ತಿರುವನಂತಪುರಂಗೆ ಕರೆತಂದು, ಮತ್ತೊಮ್ಮೆ ಪರೀಕ್ಷಿಸುವ ಯತ್ನ ಮಾಡಿ ವಿಫಲರಾದರು. ಸಾರಾಯಿಯಲ್ಲಿ ವಿಷ ಬೆರೆಸಿ ಕುಡಿಸಿದರು. ಆದರೆ ಪ್ರಾಣಾಪಾಯದಿಂದ ಪಾರಾದರು. ಇದಾಗುತ್ತಿರುವಾಗಲೇ ಜನರು ಸಾವಿರಾರು ಸಂಖ್ಯೆಯಲ್ಲಿ ಆತನ ಆಶೀರ್ವಚನಕ್ಕೋಸ್ಕರ ತಿರುವನಂತಪುರಂ ಸೇರಿಕೊಂಡಾಗ ರಾಜ ದಿಗಿಲು ಬಿದ್ದನು. ಜನರಲ್ಲಿ ರೋಷಾವೇಶಗಳು ಕಟ್ಟೆಯೊಡೆದಾಗ ವೈಕುಂದಾರ್‌ನ್ನು ಬಿಡುಗಡೆ ಮಾಡಬೇಕೆಂದು ತೀರ್ಮಾನಿಸಿಕೊಂಡರು. ಆದರೆ ವೈಕುಂದಾರ್ ಒಪ್ಪಿಕೊಳ್ಳಲಿಲ್ಲ. ತಮ್ಮ ಶಿಕ್ಷಾವಧಿ 110 ದಿನಗಳು ಜೈಲಿನಲ್ಲಿ ಕಳೆಯುತ್ತಾರೆ.

ಆ ನಂತರ ಆತ ತನ್ನ ಸಾಮಾಜಿಕ ಪ್ರತಿಭಟನಾ ಆಂದೋಲನದೊಂದಿಗೆ ಸಾಂಸ್ಕೃತಿಕವಾದ ಒಂದು ಹೊಸ ಮತ ವಿಧಾನವನ್ನು ಸ್ಥಾಪಿಸಿದರು. ಅದೇ ‘ಅಯ್ಯಾವಾಜಿ’ ಸಂಪ್ರದಾಯ. ಈ ಪದ್ಧತಿಗೆ ದೇಗುಲ ಇರುತ್ತದೆ. ದೇವರಿಲ್ಲ. ಮನೆಯಲ್ಲಿ, ಗುಡಿಯಲ್ಲಿ ಒಂದು ಕನ್ನಡಿ ಮುಂದೆ ನಿಂತು ಮಾತ್ರವೇ ಪೂಜೆ ಮಾಡಬೇಕು. ದೇವರು ಎಲ್ಲೋ ಇಲ್ಲ, ನಿನ್ನಲ್ಲೇ ಇದ್ದಾನೆ ಎಂಬುದೇ ಅದರರ್ಥ.

ಇದರಲ್ಲಿ ವೇದ, ಪುರಾಣ, ರಾಮಾಯಣ, ಮಹಾಭಾರತಗಳಿಗೆ ಸ್ಥಾನವಿಲ್ಲ. ಸಂಸ್ಕೃತ ಮಂತ್ರಗಳೂ ಪಠಣಗಳು ಇಲ್ಲ. ಭಾಗವತ ಸ್ಮತಿಗಳಿಲ್ಲ, ಈ ಸಂಪ್ರದಾಯಕ್ಕೋಸ್ಕರ ಮೊತ್ತಮೊದಲು ಕನ್ಯಾಕುಮಾರಿಯಲ್ಲಿ ಒಂದು ದೇಗುಲ ನಿರ್ಮಿಸಿದರು ವೈಕುಂದಾರ್. ಆ ದೇಗುಲದ ಹೆಸರು ಸ್ವಾಮಿ ತೋಪಿ ಅದರಲ್ಲಿನ ಭಾಗವಾಗಿಯೇ ಆತ ‘ಅಖಿಲಂ’ ಹೆಸರಿನಲ್ಲಿ ಒಂದು ಗ್ರಂಥ ಬರೆದಿದ್ದಾರೆ. ‘ನಿತ್ಯಂ ತಿರುನಾಳ್’(ದಿನವೂ ಹಬ್ಬ) ಎಂದು ಪ್ರತ್ಯೇಕವಾದ ಹಬ್ಬಗಳ ಅಗತ್ಯ ಇಲ್ಲ ಎಂದು ಪ್ರಕಟಿಸಿದರು.

 ಇವತ್ತು ಅದೇ ಸಾಮಾಜಿಕ ವರ್ಗಕ್ಕೆ ಸೇರಿದವರು ತಮಿಳುನಾಡಿನಲ್ಲಿ ತಮ್ಮನ್ನು ಪ್ರತ್ಯೇಕ ಮತ ಎಂದು ಗುರ್ತಿಸ ಬೇಕೆಂದು, ತಮಗೂ ಹಿಂದೂ ಮತಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಘೋಷಿಸಿದ್ದಾರೆ. ಅದಕ್ಕೆ ಅಯ್ಯೆ ವೈಕುಂದಾರ್ ಹೇಳಿದ ವಿಷಯವನ್ನು ಅವರು ಪ್ರಸ್ತಾಪಿಸಿದ್ದಾರೆ. ‘ಓ ದೇವರೇ, ಇತ್ತ ಆಲಿಸಿರಿ! ನನ್ನ ಜನರಿಗೆ ಒಂದು ಪ್ರತ್ಯೇಕವಾದ ಅಸ್ತಿತ್ವ ಇದೆ. ಸಂಪ್ರದಾಯಗಳು, ಕಟ್ಟುಪಾಡುಗಳು ನಮಗಿಲ್ಲ. ನಾವು ದೇಗುಲಗಳ ನಿರ್ಮಿಸೆವು. ಪೂಜಾರಿಗಳು ಇರುವುದಿಲ್ಲ. ನಾವು ದನಗಳನ್ನು, ಮಣ್ಣಿನ ವಿಗ್ರಹಗಳನ್ನು ಪೂಜಿಸೆವು. ನಾವು ಮೇಕೆ, ಕೋಳಿ, ಕುರಿ, ಎತ್ತುಗಳನ್ನು ಒಟ್ಟಿನಲ್ಲಿ ಪಶುಬಲಿ ಕೊಡೆವು. ಜೀವಸಂಕುಲವನ್ನು ಇಡಿಯಾಗಿ ಪ್ರೇಮಿಸುತ್ತೇವೆ....’

share
ವಾರ್ತಾಭಾರತಿ
ವಾರ್ತಾಭಾರತಿ
Next Story
X