ಸಿದ್ದಾಪುರ: ಬಂದ್‍ಗೆ ಶೂನ್ಯ ಪ್ರತಿಕ್ರಿಯೆ

ಸಿದ್ದಾಪುರ (ಕೊಡಗು), ಮೇ.28: ನೂತನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡದೆ ವಚನಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿ ಬೆಜೆಪಿ ಕರೆ ನೀಡಿದ್ದ ಸ್ವಯಂಪ್ರೇರಿತ ಕರ್ನಾಟಕ ಬಂದ್‍ಗೆ ಜಿಲ್ಲೆಯ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯಲ್ಲಿ ಶೂನ್ಯ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಿದ್ದಾಪುರದಲ್ಲಿ ಬೆಳಿಗ್ಗೆಯಿಂದಲೇ ಸರಕಾರಿ ಬಸ್, ಆಟೋ ರಿಕ್ಷಾ ಸೇರಿದಂತೆ ವಾಹನಗಳ ಸಂಚಾರ ಎಂದಿನಂತೆ ಇತ್ತು. ಅಂಗಡಿಮುಂಗಟ್ಟುಗಳು, ವಿವಿಧ ಸರಕಾರಿ ಕಚೇರಿಗಳು, ಬ್ಯಾಂಕ್‍ಗಳು ಕಾರ್ಯನಿರ್ವಹಿಸಿದ್ದು, ರಾಜ್ಯಾದ್ಯಂತ ಶಾಲೆಗಳು ಪ್ರಾರಂಭಗೊಂಡಿದ್ದರಿಂದ ಶಾಲೆಗಳೂ ತೆರೆದಿತ್ತು. ಖಾಸಗಿ ಬಸ್ಸುಗಳು ರಸ್ತೆಗಿಳಿಯಲಿಲ್ಲ.
ಸಮೀಪದ ನೆಲ್ಯಹುದಿಕೇರಿಯಲ್ಲೂ ಎಂದಿನಂತೆ ಬೆಳಿಗ್ಗೆಯಿಂದಲೇ ಅಂಗಡಿ, ಹೋಟೆಲ್‍ಗಳು ತೆರೆದಿತ್ತು. ಆಟೋ ರಿಕ್ಷಾ ಸೇರಿದಂತೆ ವಾಹನಗಳ ಸಂಚಾರ ಮಾಮೂಲಿಯಂತೆ ಕಂಡು ಬಂತು. ಶಾಲಾ ಕಾಲೇಜುಗಳು ಹಾಗೂ ಕಚೇರಿಗಳು ತೆರೆದಿತ್ತು.
Next Story





