ಬಿಜೆಪಿ ಟಿಕೆಟ್‌ಗಾಗಿ ಭೋಜನ ಕೂಟ: ಎಫ್‌ಐಆರ್ ದಾಖಲು
ಬೆಂಗಳೂರು, ಮೇ 28: ಜಯನಗರ ವ್ಯಾಪ್ತಿಯ ಹೊಟೇಲ್‌ವೊಂದರಲ್ಲಿ ಸಾಮೂಹಿಕ ಭೋಜನ ಕೂಟ ಆಯೋಜಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಪಾಲಿಕೆ ಸದಸ್ಯ ಎನ್.ನಾಗರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜಯನಗರ ಕ್ಷೇತ್ರದ ಸಂಚಾರ ದಳದ ಅಧಿಕಾರಿ ಬಿ.ಬಿ.ಬೋರಿ ಅವರು ಈ ಸಂಬಂಧ ದೂರು ನೀಡಿದ್ದರು. ಅದರನ್ವಯ ನಾಗರಾಜ್ ಹಾಗೂ ಅವರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವಿಚಾರಣೆಗೆ ಹಾಜರಾಗುವಂತೆ ಸದ್ಯದಲ್ಲೇ ನೋಟಿಸ್ ನೀಡಲಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ನಾಗರಾಜ್ ಅವರು, ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಿ ಬಿ ಫಾರ್ಮ್ ಪಡೆಯುವ ಉದ್ದೇಶದಿಂದಲೇ ಪಕ್ಷದ ಕೆಲ ಮುಖಂಡರನ್ನು ಆಹ್ವಾನಿಸಿ ಮೇ 22ರಂದು ಭೋಜನ ಕೂಟ ಆಯೋಜಿಸಿದ್ದರು. ಅದಕ್ಕೆ ಚುನಾವಣಾ ಅಧಿಕಾರಿಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಹೀಗಾಗಿ, ಹೊಟೇಲ್ ಮೇಲೆ ಸಂಚಾರ ದಳದ ಅಧಿಕಾರಿಗಳು ದಾಳಿ ಮಾಡಿದ್ದರು ಎಂದು ತಿಳಿದುಬಂದಿದೆ.
Next Story





