ಅನುಮಾನಾಸ್ಪದ ಸಾವು: ದೂರು
ಕಾರ್ಕಳ, ಮೇ 28: ವ್ಯಕ್ತಿಯೊಬ್ಬರು ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಮಾಳ ಗ್ರಾಮ ಕಡಾರಿ ನಿವಾಸಿ ಪ್ರಕಾಶ್ ಹೆಗ್ಡೆ(55) ಎಂದು ಗುರುತಿಸಲಾಗಿದೆ. ಇವರು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, ಮೇ 28ರಂದು ಬೆಳಗ್ಗೆ 8:45ರ ಸುಮಾರಿಗೆ ಪ್ರಕಾಶ್ ಹೆಗ್ಡೆಯ ಪತ್ನಿ ಮಂಜುಳಾ, ಪ್ರಕಾಶ್ ಸಹೋದರ ಪ್ರಶಾಂತ್ ಹೆಗ್ಡೆಗೆ ಕರೆ ಮಾಡಿ ‘ತಾನು ತಾಯಿಯ ಮನೆಗೆ ಹೋಗಿದ್ದು, ಇಂದು ಮನೆಗೆ ಬಂದು ನೋಡುವಾಗ ಪ್ರಕಾಶ್ ಹೆಗ್ಡೆ ಮನೆಯ ಕೊಠಡಿಯಲ್ಲಿ ಬಿದ್ದಿದ್ದರು. ಅವರ ತಲೆಯಿಂದ ರಕ್ತ ಬರುತ್ತಿದ್ದು, ಅವರು ಮಾತನಾಡುತ್ತಿಲ್ಲ ಎಂದು ತಿಳಿಸಿದ್ದರು.
ಅದರಂತೆ ಪ್ರಶಾಂತ್ ಹೆಗ್ಡೆ ಸ್ಥಳಕ್ಕೆ ಬಂದು ನೋಡುವಾಗ ಪ್ರಕಾಶ್ ಹಗ್ಡೆ ರಕ್ತಸ್ರಾವವಾಗಿ ಮೃತಪಟ್ಟಿದ್ದರು. ಪ್ರಕಾಶ್ ಹೆಗ್ಡೆ ಸಾವಿನಲ್ಲಿ ಅನುಮಾನವಿರುವು ದಾಗಿ ಪ್ರಶಾಂತ್ ಹೆಗ್ಡೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ಗ್ರಾಮಾಂತರ ಪೊಲೀಸರು ತನಿಖೆ ನಡೆಸು ತ್ತಿದ್ದಾರೆ.





