ಕುಂದಾಪುರ ಕೋಡಿ: ಜುಮಾ ಮಸೀದಿಗೆ ಆಯ್ಕೆ

ಜಿ.ಎಂ.ಮುಸ್ತಫಾ
ಮಂಗಳೂರು, ಮೇ 28: ಕುಂದಾಪುರ ಕೋಡಿ ಮುಹಿಯ್ಯುದ್ದೀನ್ ಜುಮಾ ಮಸೀದಿಯ 2018-19ನೆ ಸಾಲಿನ ಮಹಾಸಭೆಯು ಇತ್ತೀಚೆಗೆ ಬಿ.ಎಂ. ಹಂಝ ಸಾಹೇಬ್ರ ಅಧ್ಯಕ್ಷತೆಯಲ್ಲಿ ಜರುಗಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಖತೀಬ್ ಯೂಸುಫ್ ಸಖಾಫಿ ದುಆಗೈದರು. ಪ್ರಧಾನ ಕಾರ್ಯದರ್ಶಿ ಬಿ. ಅಬ್ದುಲ್ ಅಝೀಝ್ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಎಸ್.ಯೂಸುಫ್ ಸ್ವಾಗತಿಸಿದರು.
ಅಧ್ಯಕ್ಷರಾಗಿ ಜಿ.ಎಂ.ಮುಸ್ತಫಾ, ಉಪಾಧ್ಯಕ್ಷರಾಗಿ ಕೆ.ಬಿ.ಬಾಷಾ ಹಾಜಿ, ಗೌರವಾಧ್ಯಕ್ಷರಾಗಿ ರಾಯಲ್ ಹುಸೇನ್, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಅಬ್ದುಲ್ ಅಝೀಝ್, ಜೊತೆ ಕಾರ್ಯದರ್ಶಿಯಾಗಿ ಕೆ.ಎಸ್.ರಿಯಾಝ್, ಕೋಶಾಧಿಕಾರಿಯಾಗಿ ನಾಸಿರ್ ನೈನಾರ್, ಲೆಕ್ಕಪರಿಶೋಧಕರಾಗಿ ಮುಹಮ್ಮದ್ ಮನ್ಸೂರ್ ಆಯ್ಕೆಯಾದರು.
Next Story





