ಸಿಡಿಲಾಘಾತ: ಪೊಲೀಸ್ ಸಿಬ್ಬಂದಿಗೆ ಗಾಯ
ಮಂಗಳೂರು, ಮೇ 28: ನಗರದ ನೆಹರೂ ಮೈದಾನದಲ್ಲಿ ರವಿವಾರ ಸಂಜೆ ಆಯೋಜಿಸಲಾಗಿದ್ದ ಐಪಿಎಲ್ ಫೈನಲ್ ಪಂದ್ಯದ ನೇರ ಪ್ರಸಾರ ವೀಕ್ಷಣೆ ಸಂದರ್ಭ ಮೈದಾನದಲ್ಲಿದ್ದ ಮಂಗಳೂರು ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಸಿದ್ದಪ್ಪ ಜಿ. (23) ಸಿಡಿಲಾಘಾತದಿಂದ ಗಾಯಗೊಂಡಿದ್ದಾರೆ.
ರವಿವಾರ ಐಪಿಎಲ್ ಪಂದ್ಯದ ಫೈನಲ್ ನಡೆದಿದ್ದರಿಂದ ನೆಹರೂ ಮೈದಾನದಲ್ಲಿ ಪಂದ್ಯ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭ ಸಿಡಿಲು, ಮಿಂಚು ಸಹಿತ ಭಾರೀ ಮಳೆಯಾಗಿತ್ತು. ಸಿಡಿಲು ಬಡಿದಿದ್ದರಿಂದ ಅದರ ಆಘಾತಕ್ಕೆ ಮೈದಾನದಲ್ಲಿದ್ದ ಪೊಲೀಸ್ ಸಿಬ್ಬಂದಿ ಸಿದ್ದಪ್ಪ ಜಿ. ಗಾಯಗೊಂಡರು. ಅವರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯಲ್ಲಿ ಸಿದ್ದಪ್ಪ ಅವರ ಮುಖಕ್ಕೆ ಗಾಯವಾಗಿದೆ.
Next Story





