ಚಿಕ್ಕಮಗಳೂರು: ಎಂ.ಓ.ಜೋಯಿರಾಗೆ 'ಛಾಯಾ ಸಾಧಕ' ಪ್ರಶಸ್ತಿ

ಚಿಕ್ಕಮಗಳೂರು, ಮೇ 28: ಬೆಂಗಳೂರಿನ ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ಸಭಾಂಗಣದಲ್ಲಿ ಕರ್ನಾಟಕ ಛಾಯಾ ಚಿತ್ರಗಾರರ ಸಂಘದ 6ನೇ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ರಶ್ಮಿ ಸ್ಟುಡಿಯೋ ಮಾಲಕರಾದ ಎಂ.ಓ.ಜೋಯಿರವರಿಗೆ ಛಾಯಾ ಸಾಧಕ ಪ್ರಶಸ್ತಿಯನ್ನು ವಿತರಿಸಲಾಯಿತು.
ಮುಂಬೈನ ಛಾಯಾಗ್ರಾಹಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿದ್ದ ವಿಕಾಸ್‍ಇಂಗ್ಲೆ, ಗುಜರಾತಿನ ದೀಪಕ್ ಓಗೇರಾ, ಕೆಪಿಎ ಅಧ್ಯಕ್ಷರಾದ ಬಿ.ಎಸ್.ಶಶಿಧರ್. ಕಾರ್ಯದರ್ಶಿ ಎಸ್.ಪರಮೇಶ್, ಖಜಾಂಚಿ ಸತ್ಯನಾರಾಯಣರಾವ್, ಉಪಾಧ್ಯಕ್ಷ ಎಚ್.ಎಸ್.ನಾಗೇಶ್ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಜಯಚಂದ್ರ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕಿಶೋರ್ ಕುಮಾರ್ ಉಪಸ್ಥಿತರಿದ್ದರು.
Next Story





