ಪತ್ರಕರ್ತರಿಗೆ ಅವಮಾನಿಸಿದ ಎಐಎಡಿಎಂಕೆ ಐಟಿ ಘಟಕದ ಸದಸ್ಯ ವಜಾ

ಚೆನ್ನೈ, ಮೇ 28: ಪತ್ರಕರ್ತರಿಗೆ ಅಪಮಾನಿಸಿ ಟ್ವೀಟ್ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಎಐಎಡಿಎಂಕೆ ತನ್ನ ಐಟಿ ಘಟಕದ ಸದಸ್ಯ ಹರಿ ಪ್ರಭಾಕರನ್ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ಸೋಮವಾರ ವಜಾಗೊಳಿಸಿದೆ.
ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದ ಹಾಗೂ ಪಕ್ಷಕ್ಕೆ ಕೆಟ್ಟ ಹೆಸರು ತಂದ ಹಿನ್ನೆಲೆಯಲ್ಲಿ ಪ್ರಭಾಕರನ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಐಎಡಿಎಂಕೆಯ ಪತ್ರಿಕಾ ಹೇಳಿಕೆ ತಿಳಿಸಿದೆ. ತೂತುಕುಡಿಯಲ್ಲಿ ಸ್ಟರ್ಲೈಟ್ ವಿರುದ್ಧ ಪ್ರತಿಭಟನೆ ನಡೆಸಿರುವುದನ್ನು ವರದಿ ಮಾಡಿದ ಪತ್ರಕರ್ತರನ್ನು ಹರಿ ಪ್ರಭಾಕರನ್ ಬೀದಿ ನಾಯಿಗೆ ಹೋಲಿಸಿ ಟ್ವೀಟ್ ಮಾಡಿದ್ದರು. ಬಿಸ್ಕಿಟ್‌ಗಾಗಿ ಬೊಗಳುವ ಬೀದಿನಾಯಿಗಳನ್ನು ಒಳಗೆ ಬಿಡುವ ಬದಲು ಗೇಟಿಗೆ ಕಟ್ಟಿ ಹಾಕಬೇಕು ಎಂದು ಹರಿ ಪ್ರಭಾಕರನ್ ಟ್ವೀಟ್ ಮಾಡಿದ್ದರು.
Next Story





