ಬ್ರಿಟಿಷರು ನೆಹರೂ, ಗಾಂಧಿಯನ್ನು ಇರಿಸಿದ್ದ ಜೈಲುಗಳಲ್ಲೇ ಮಲ್ಯನನ್ನು ಇರಿಸುತ್ತೇವೆ: ಬ್ರಿಟನ್ ಗೆ ತಿಳಿಸಿದ ಮೋದಿ

ಹೊಸದಿಲ್ಲಿ, ಮೇ 28: ಗಡಿಪಾರು ಮಾಡುವಂತೆ ಭಾರತ ಇಂಗ್ಲೆಂಡ್‌ಗೆ ಮಾಡಿರುವ ಮನವಿಯ ವಿರುದ್ಧ ಹೋರಾಡುತ್ತಿರುವ ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ, ಬ್ರಿಟಿಶ್ ನ್ಯಾಯಾಲಯದಲ್ಲಿ ಭಾರತದ ಕಾರಾಗೃಹಗಳ ದಯನೀಯ ಸ್ಥಿತಿಯ ಬಗ್ಗೆ ವಾದಿಸಿದ್ದಾನೆ. ಈ ವರ್ಷ ಆರಂಭದಲ್ಲಿ ಥೆರೆಸಾ ಮೇ ಅವರನ್ನು ಭೇಟಿಯಾದ ಸಂದರ್ಭ ಮೋದಿ ಅವರು ಇದೇ ವಿಷಯಕ್ಕೆ ಸಂಬಂಧಿಸಿ ಅವರನ್ನು ತೀಕ್ಷ್ಣ ಪ್ರತ್ರಿಕ್ರಿಯೆ ನೀಡಿದ್ದಾರೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಭಾರತದ ಕಾರಾಗೃಹಗಳ ಸ್ಥಿತಿಗತಿ ಬಗ್ಗೆ ನಿಮ್ಮ ದೇಶದಲ್ಲಿರುವ ನ್ಯಾಯಾಲಯಕ್ಕೆ ಕೇಳುವ ಹಕ್ಕು ಇಲ್ಲ. ಮಹಾತ್ಮಾ ಗಾಂಧಿ ಹಾಗೂ ಜವಾಹರ್‌ಲಾಲ್ ನೆಹರೂ ಅವರಂತಹ ನಮ್ಮ ನಾಯಕರನ್ನು ಇರಿಸಿಲಾಗಿದ್ದ ಕಾರಾಗೃಹ ಈಗಲೂ ಇದೆ ಎಂದು ಅವರು ಹೇಳಿದ್ದಾರೆ. ಸರಕಾರದ ಕಾಮನ್‌ವೆಲ್ತ್ ಮುಖ್ಯಸ್ಥರ ಸಭೆಯ ನೇಪಥ್ಯದಲ್ಲಿ ಲಂಡನ್‌ನಲ್ಲಿ ಎಪ್ರಿಲ್‌ನಲ್ಲಿ ಥೆರೆಸಾ ಮೇ ಅವರನ್ನು ಭೇಟಿಯಾಗಿರುವ ಮೋದಿ ವಿಜಯ ಮಲ್ಯಾ ಅವರ ಗಡಿಪಾರಿನ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಲೆಕ್ಕಕ್ಕಿಂತ ಹೆಚ್ಚಿನ ಕೈದಿಗಳು ಇರುವುದು ಭಾರತದ ಕಾರಾಗೃಹಗಳ ಸಮಸ್ಯೆ. ಈ ಪರಿಸ್ಥಿತಿ ಮಾನವ ಹಕ್ಕುಗಳ ಅವಶ್ಯಕತೆ ಈಡೇರಿಸುವುದಿಲ್ಲ ಎಂದು ಇಂಗ್ಲೆಂಡ್‌ನ ನ್ಯಾಯಮೂರ್ತಿ ಕಳೆದ ವರ್ಷ ಹೇಳಿದ್ದರು. ವಿಜಯ ಮಲ್ಯ ಕೂಡ ಭಾರತದ ಜೈಲುಗಳಲ್ಲಿ ಸ್ವಚ್ಛತೆ ಇಲ್ಲ ಹಾಗೂ ಕಿರುಕುಳ ನೀಡಲಾಗುತ್ತದೆ ಎಂದು ಹೇಳಿದ್ದ.







