ಮೈಸೂರು: ಗಾಂಜಾ ಚಟಕ್ಕೆ ಯುವಕ ಬಲಿ

ಮೈಸೂರು,ಮೇ.28: ಮೈಸೂರು ನಗರದ ಮಂಜುನಾಥಪುರದಲ್ಲಿ ಗಾಂಜಾ ಚಟಕ್ಕೆ ಯುವಕನೋರ್ವ ಬಲಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರು ನಗರದ ಮಂಜುನಾಥಪುರದ ನಿವಾಸಿ ಚಂದ್ರು (26) ಗಾಂಜಾ ಚಟಕ್ಕೆ ಬಲಿಯಾದವನಾಗಿದ್ದಾನೆ. ಈತ ಹಲವು ದಿನಗಳಿಂದ ಗಾಂಜಾದ ದಾಸನಾಗಿದ್ದ. ಗಾಂಜಾ ಚಟದಿಂದ ಹೊರಬರಲಾರದೆ ಮಾನಸಿಕ ಖಿನ್ನತೆಗೆ ಜಾರಿದ್ದ. ಗಾಂಜಾ ಚಟದಿಂದ ಹೊರಬರಲಾರದೆ ಕೊನೆಗೆ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಮೈಸೂರಿನಲ್ಲೆಡೆ ಎಗ್ಗಿಲ್ಲದೆ ಗಾಂಜಾ ದಂಧೆ ನಡೆಯುತ್ತಿದ್ದು, ಗಾಂಜಾ ಚಟಕ್ಕೆ ಹಲವು ಯುವಕರು ಬಲಿಯಾಗುತ್ತಿದ್ದಾರೆ. ಗಾಂಜಾ ಚಟಕ್ಕೆ ಯುವಜನತೆ ಬಲಿಯಾಗುವುದನ್ನು ತಪ್ಪಿಸಲು ಪೊಲೀಸರು ಸೂಕ್ತ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಸಂಬಂಧ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





