ಎಸ್. ಕೆ. ಎಸ್.ಎಂ ನಿಂದ ರಮಝಾನ್ ವಿಶೇಷ ಪ್ರವಚನ ‘ರಮದಾನ್ ಲೆಕ್ಚರ್’

ಮಂಗಳೂರು, ಮೇ 28: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಕುದ್ರೋಳಿ ಘಟಕದ ವತಿಯಿಂದ ರಮಝಾನ್ ವಿಶೇಷ ಪ್ರವಚನ ‘ರಮದಾನ್ ಲೆಕ್ಚರ್’ ಕಾರ್ಯಕ್ರ್ರಮ, ಮಂಗಳೂರು ಕುದ್ರೋಳಿಯ ಜಾಮಿಯಾ ಮಸೀದಿಯಲ್ಲಿ ಮೇ 31 ರಂದು ಝುಹರ್ ನಮಾಝಿನ ಬಳಿಕ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಖ್ಯಾತ ಉರ್ದು ವಾಗ್ಮಿ ಶೇಕ್ ಅಬ್ದುರ್ರಹೀಮ್ ಸಗ್ರಿ, ಬದ್ರ್ ಸಂದೇಶ ಎಂಬ ವಿಷಯದಲ್ಲಿ ವಿಶೇಷ ಪ್ರವಚನ ನೀಡಲಿದ್ದಾರೆ ಎಂದು ಎಸ್. ಕೆ. ಎಸ್. ಎಂ ಕುದ್ರೋಳಿ ಘಟಕದ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ಕುದ್ರೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





