ಭಾರೀ ಮಳೆ: ಕುದ್ರೋಳಿ ಅಳಕೆಯಲ್ಲಿ ಬೋಟ್ ಬಳಸಿದ ಸಾರ್ವಜನಿಕರು

ಮಂಗಳೂರು, ಮೇ 29: ಇಂದು ಸುರಿದ ಭಾರೀ ಮಳೆಗೆ ನಗರದ ಕುದ್ರೋಳಿ ಅಳಕೆಯ ರಸ್ತೆಯಲ್ಲಿ ನೀರು ತುಂಬಿದ್ದು, ಶಾಲಾ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರನ್ನು ದೋಣಿ ಮೂಲಕ ಸಾಗಿಸಲಾಯಿತು.
ಇಂದಿನ ಭಾರೀ ಮಳೆಗೆ ಮಂಗಳೂರು ತತ್ತರಿಸಿದ್ದು, ಇದು ಜಿಲ್ಲಾಡಳಿತ ಹಾಗೂ ಮನಪಾದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಅಳಕೆಯ ಗುಜರಾತಿ ಶಾಲೆಯ ಮಕ್ಕಳು ಕೂಡಾ ಶಾಲೆಯಿಂದ ಹೊರಬರಲಾಗದೆ ತತ್ತರಿಸಿದರು. ಈ ಮಧ್ಯೆ ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ರಕ್ಷಿಸಿದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
Next Story





