Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸಾಲ ಮನ್ನಾ ವೈಜ್ಞಾನಿಕವಾಗಿರಲಿ:...

ಸಾಲ ಮನ್ನಾ ವೈಜ್ಞಾನಿಕವಾಗಿರಲಿ: ಶಿವಾನಂದಸ್ವಾಮಿ

ವಾರ್ತಾಭಾರತಿವಾರ್ತಾಭಾರತಿ29 May 2018 8:07 PM IST
share
ಸಾಲ ಮನ್ನಾ ವೈಜ್ಞಾನಿಕವಾಗಿರಲಿ: ಶಿವಾನಂದಸ್ವಾಮಿ

ಚಿಕ್ಕಮಗಳೂರು, ಮೇ 29: ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ ಕುಮಾರಸ್ವಾಮಿ ಅವರು, ಅವರ ಮಾತಿನಂತೆ ರೈತರ ಸಾಲಮನ್ನಾ ಮಾಡುವುದು ಅನಿವಾರ್ಯ ಹಾಗೂ ಅಗತ್ಯವಾಗಿದೆ. ಇಂತಹ ಸಾಲ ಮನ್ನಾ ವೈಜ್ಞಾನಿಕವಾಗಿರಲೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಸಿ ಶಿವಾನಂದಸ್ವಾಮಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹಾಗೂ ಚುನಾವಣಾ ಪ್ರಚಾರ ಬಾಷಣಗಳಲ್ಲಿ ಪ್ರತಿ ದಿನವೂ ಕೂಡ ರೈತರ ಸಂಕಷ್ಟವನ್ನು ಪರಿಹರಿಸುವುದೇ ನಮ್ಮ ಆದ್ಯ ಕರ್ತವ್ಯ . ನಾವು ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆಂಬ ಮಾತುಗಳನ್ನು ಆಡುತ್ತಲೇ ಬಂದರು. ಚುನಾವಣೆ ನಡೆದು ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಆಗುವ ಭಾಗ್ಯ ಒದಗಿಬಂತು. ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಕೆಲಸವೇ ನಮ್ಮಗಳ ಸಾಲ ಮನ್ನಾ ಮಾಡುತ್ತಾರೆಂದು ರೈತ ಸಾಲಗಾರರು ಆಸೆ ಕಣ್ಗಳಿಂದ ಟಿ.ವಿ ನೋಡುತ್ತಾ ಕೂತು ಬಿಟ್ಟರು.

ಆದರೆ ರೈತರ ಆಸೆಗಳಿಗೆ ಮಣ್ಣೆರಚುವಂತೆ ನನಗೆ ಸಂಪೂರ್ಣ ಬಹುಮತ ಬರಲಿಲ್ಲ.  ಕಾಂಗ್ರೆಸ್ ನವರ ಮುಲಾಜಿನಲ್ಲಿದ್ದೆನೆಂಬ ಏನೆಲ್ಲಾ ಸಬೂಬು ಹೇಳಿ ಇದರಿಂದ ಪಾರಾಗುವ ಅವರ ಪ್ರಯತ್ನ ಫಲಿಸಲಿಲ್ಲ. ಇತ್ತ ವಿರೋಧಿ ಪಕ್ಷದವರು ಹೋರಾಟಕ್ಕಿಳಿದರೆ, ಅವರ ಪಕ್ಷದಲ್ಲೇ ಸಾಲ ಮನ್ನಾ ಘೋಷಿಸಿ ಎಂಬ ಧ್ವನಿ ಎದ್ದಿದೆ. ಹೀಗೆಯೇ ತಡವಾದರೆ, ಕುಮಾರಸ್ವಾಮಿಯವರಿಗೆ ಸರ್ಕಾರವನ್ನು ಸಂಪೂರ್ಣವಾಗಿ ನಡೆಸುವಲ್ಲಿ ಸಾಲ ಮನ್ನಾ ವಿಷಯ ಮಗ್ಗುಲ ಮುಳ್ಳಾಗಿ ಪರಿಣಮಿಸಬಹುದು. ಇದನ್ನೆಲ್ಲಾ ಅರಿತ ಅವರೀಗ ಬುಧವಾರ ರೈತರ, ಪ್ರಗತಿಪರರು ಇತ್ಯಾದಿಯವರ ಸಭೆ ಕರೆದಿದ್ದಾರೆ ಅನಿವಾರ್ಯವಾಗಿ ಸಾಲ ಮನ್ನಾ ಮಾಡಲಿದ್ದಾರೆ.

ಹೀಗೆ ಸಾಲ ಮನ್ನಾ ಮಾಡುವಾಗ, ಇದುವರೆಗೂ ಸಹಕಾರ ಸಂಘಗಳು ಹಾಗೂ ಬ್ಯಾಂಕುಗಳಿಗೆ ಯಾರೆಲ್ಲಾ ಅವದಿಗೆ ಸರಿಯಾಗಿ ಸಾಲ ತುಂಬಿ ಅಥವಾ ನವೀಕರಣ ಮಾಡಿಸಿದ್ದಾರೋ ಅವರೆಲ್ಲರಿಗೂ ಮೊದಲ ಆದ್ಯತೆಯಲ್ಲಿ ಸಾಲ ಮನ್ನಾ ಆಗಬೇಕು. ಸಾಮಾನ್ಯವಾಗಿ ಮೇ 31 ರ ವರೆಗೆ ಸಹಕಾರ ಸಂಘಗಳ ಬೆಳೆ ಸಾಲ ನವೀಕರಣ ಅವಧಿ ಇದೆ. ಈಗಾಗಲೇ ಶೇ 85 ರಷ್ಟು ಸಾಲಗಾರರು ನವೀಕರಣ ಮಾಡಿಸಿಕೊಂಡಿದ್ದಾರೆ. ಇನ್ನುಳಿದವರು ನವೀಕರಣಕ್ಕಾಗಿ ಸಂಘಗಳಿಗೆ ಹಣ ತುಂಬಿದ್ದಾರೆ. ಇವರ್ಯಾರು ಈಗ ಸಾಲಗಾರರಲ್ಲ. ಸಹಕಾರ ಸಂಘಗಳು ಈ ಹಣವನ್ನು ಡಿಸಿಸಿ ಬ್ಯಾಂಕುಗಳಿಗೆ ತುಂಬಿ, ನವೀಕರಣ ಮಾಡಿಸಲು 31 ರ ಸಂಜೆ ವರೆಗೆ ಸಮಯವಿದೆ. ಆದುದರಿಂದ ಮೇ 31 ನ್ನು ಅಂತಿಮ ದಿನವನ್ನಾಗಿ ಮಾಡಿ ಸಾಲ ಮನ್ನಾ ಮಾಡಿದರೆ ಅದು ನ್ಯಾಯ ಹಾಗೂ ವೈಜ್ಞಾನಿಕವಾಗಿರುತ್ತದೆ.

ಒಂದೊಮ್ಮೆ ಹತ್ತಾರು ವರ್ಷಗಳಿಂದ ಸಾಲ ಪಡೆದು ಸರ್ಕಾರ ಎಂದಾದರೂ ಮನ್ನಾ ಮಾಡುತ್ತದೆಯಿಂದು ಸುಸ್ತಿದಾರರಾಗಿರುವವರಿಗೆ ಸಾಲ ಮನ್ನಾದಲ್ಲಿ ಆದ್ಯತೆ ನೀಡಿದರೆ ಸೋಮಾರಿಗಳಿಗೆ ನೀರೆರೆದಂತಾಗುತ್ತದೆ.  ಸಕಾಲಕ್ಕೆ ಸಾಲ  ಕಟ್ಟಿ ನವೀಕರಣ ಮಾಡಿಸಿಕೊಳ್ಳುವ ರೈತರೂ ಕೂಡ ನಾವೇಕೆ ಸಾಲ ಕಟ್ಟಬೇಕು ಎಂಬ ತೀರ್ಮಾನಕ್ಕೆ ಬಂದರೆ, ರಾಜ್ಯದ ಸಹಕಾರಿ ವ್ಯವಸ್ಥೆಯೇ ಬುಡಮೇಲು ಆಗುತ್ತದೆ. ಆದುದರಿಂದ ಅವರಿಗೂ ಸಾಲ ಮನ್ನಾ ಮಾಡಲಿ, ಆದರೆ ಅವರು ಕನಿಷ್ಟ ಅಸಲು ತುಂಬಿದರೆ ಬಡ್ಡಿ ಮನ್ನಾ ಆದಲ್ಲಿ ಒಳ್ಳೆಯದು ಎಂದು ಅವರು ರಾಜ್ಯದ ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X