ಏರ್ ಇಂಡಿಯಾ ಗಗನ ಸಖಿಗೆ ಲೈಂಗಿಕ ಕಿರುಕುಳ: ಆರೋಪ

ಹೊಸದಿಲ್ಲಿ, ಮೇ 30: ಹಿರಿಯ ಎಕ್ಸಿಕ್ಯೂಟಿವ್ ಒಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಏರ್ ಇಂಡಿಯಾದ ಗಗನ ಸಖಿ ಮಂಗಳವಾರ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ನಾಗರಿಕ ವಿಮಾನ ಯಾನ ಸಚಿವ ಸುರೇಶ್ ಪ್ರಭು ಏರ್ ಇಂಡಿಯಾಕ್ಕೆ ಸೂಚಿಸಿದ್ದಾರೆ.
ಈ ಘಟನೆ ಬಗ್ಗೆ ತನಿಖೆ ನಡೆಸಲು ನಿಷ್ಪಕ್ಷಪಾತ ತನಿಖಾ ತಂಡ ಕಳುಹಿಸಿ ಕೊಡಿ ಎಂದು ಗಗನ ಸಖಿ ಸುರೇಶ್ ಕುಮಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸುರೇಶ್ ಪ್ರಭು ಟ್ವೀಟ್‌ನಲ್ಲಿ, ಈ ಘಟನೆಯ ತನಿಖೆ ನಡೆಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಏರ್ ಇಂಡಿಯಾಕ್ಕೆ ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನೊಂದು ಸಮಿತಿ ರೂಪಿಸಲಾಗುವುದು ಎಂದಿದ್ದಾರೆ.
Next Story





