ಮಂಗಳೂರಿನಲ್ಲಿ ಹವಾಮಾನ ವೈಪರೀತ್ಯ: ವಿಮಾನಗಳ ವಿಳಂಬ

ಮಂಗಳೂರು, ಮೇ 29: ದುಬೈ ಹಾಗೂ ಮುಂಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಾಗಿದ್ದ ಎರಡು ವಿಮಾನಗಳು ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರು ಹಾಗೂ ತಿರುವನಂದಪುರಂನಲ್ಲಿ ಇಳಿದಿದೆ.
ದುಬೈಯಿಂದ ಮಂಗಳೂರಿಗೆ ಬರಬೇಕಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಮಂಗಳೂರಿನ ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿನಲ್ಲಿ ಇಳಿಯಬೇಕಾಯಿತು. ಅಲ್ಲದೆ, ಮುಂಬೈಯಿಂದ ಮಂಗಳೂರಿಗೆ ಬರಬೇಕಾಗಿದ್ದ ಏರ್ ಇಂಡಿಯಾ ವಿಮಾನವು ತಿರುವನಂದಪುರಂನಲ್ಲಿ ಇಳಿದು ಕೆಲವು ಸಮಯದ ಬಳಿಕ ಮಂಗಳೂರಿಗೆ ಆಗಮಿಸಬೇಕಾಯಿತು ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರು ತಿಳಿಸಿದ್ದಾರೆ.
Next Story





