ಎನ್ ಡಿ ಆರ್ ಎಫ್ ತಂಡ ಮಂಗಳೂರಿಗೆ ಆಗಮನ
ಮಂಗಳೂರು, ಮೇ 29: ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (NDRF) 38 ಸಿಬ್ಬಂದಿಗಳು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಸಾವು ನೋವು ಸಂಭವಿಸಿದ್ದು, ಈ ಬಗ್ಗೆ ಮುಂದಿನ ಮುಂಜಾಗೃತ ಕ್ರಮವಾಗಿ ರಾಷ್ಟ್ರೀಯ ವಿಫತ್ತು ನಿರ್ವಾಹಣ ತಂಡವನ್ನು ಜಿಲ್ಲಾಧಿಕಾರಿ ಕರೆಸಿದ್ದಾರೆ, ತಂಡವು ಬೆಂಗಳೂರಿನಿಂದ ಹೊರಟಿದ್ದು, ಮಂಗಳೂರಿಗೆ ಮಧ್ಯ ರಾತ್ರಿ ತಲುಪಲಿದೆ ಎಂದು ಮಾಹಿತಿ ನೀಡಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿಕೆ
ಮಂಗಳೂರಿನಲ್ಲಿ ಭಾರೀ ಮಳೆ ಪರಿಣಾಮ ಜಿಲ್ಲೆಯಲ್ಲಿ 68 ಮನೆಗಳಿಗೆ ಹಾನಿ, ಮಳೆಯಿಂದಾಗಿ ಒಂದು ಸಾವು, 12 ಜನರಿಗೆ ಗಾಯವಾಗಿದೆ. ಜಿಲ್ಲಾಡಳಿತದಿಂದ ಮೃತಪಟ್ಟ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು. ಮಳೆಯಿಂದ ಹಾನಿಯಾದ ಮನೆಗಳಿಗೂ ಸೂಕ್ತ ಪರಿಹಾರವಾಗಿ ಜಿಲ್ಲಾಡಳಿತದಿಂದ ತುರ್ತು ಪರಿಹಾರ ವಿತರಣೆ ರಾತ್ರಿಯೂ ನಡೆಯಲಿದ್ದು, ಅಗತ್ಯ ಕಾರ್ಯಾಚರಣೆಗೆ ರೆಸ್ಕ್ಯೂ ತಂಡ ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.





