ಸಿಬಿಎಸ್‌ಸಿ ಫಲಿತಾಂಶ: ಮೌಂಟ್ ಕಾರ್ಮೆಲ್ ಶಾಲೆಯ 66 ವಿದ್ಯಾರ್ಥಿಗಳಿಗೆ ಉನ್ನತ ಶ್ರೇಣಿ

ಮಂಗಳೂರು, ಮೇ 29: ಸಿಬಿಎಸ್‌ಸಿ 10ನೆ ತರಗತಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ನಗರದ ಮೌಂಟ್ ಕಾರ್ಮೆಲ್ ಶಾಲೆಯ 76 ವಿದ್ಯಾರ್ಥಿಗಳ ಪೈಕಿ 66 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಶಾಲೆಯ 32 ವಿದ್ಯಾರ್ಥಿಗಳು ಶೇ. 90ಕ್ಕೂ ಅಧಿಕ, 28 ವಿದ್ಯಾರ್ಥಿಗಳು ಶೇ.80ರಿಂದ 89, 11 ವಿದ್ಯಾರ್ಥಿಗಳು ಶೇ.70ರಿಂದ 79, 5 ವಿದ್ಯಾರ್ಥಿಗಳು ಶೇ. 60ರಿಂದ 69 ಅಂಕಗಳನ್ನು ಪಡೆದಿದ್ದಾರೆ. ಕಾರುಣ್ಯ ಕೃಷ್ಣ ಪೂಜಾರಿ ಅವರು ಶೇ.98.2 ಅಂಕ ಗಳಿಸುವ ಮೂಲಕ ಶಾಲೆಗೆ ಟಾಪರ್ ಆಗಿದ್ದಾರೆ. ಸನಾ ಅಝ್‌ಮಿಯಾ (ಶೇ.97.6) ಎರಡನೆ ಟಾಪರ್, ಮೇಘನಾ ಸುಧಾಕರ ಶೆಣೈ ಮತ್ತು ರಿಹಾನ್ ಅರೋನ್ ಡಿಸಿಲ್ವ (ಶೇ. 97) ಮೂರನೆ ಟಾಪರ್ ಆಗಿದ್ದಾರೆ.
Next Story





