ಜೂ.3: ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ
ಮಂಗಳೂರು, ಮೇ 29: ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ಜೂ.3ರಂದು ಅಪರಾಹ್ನ 3 ಗಂಟೆಗೆ ಉರ್ವಾಸ್ಟೋರ್‌ನ ಯುವವಾಹಿನಿ ಸಭಾಂಗಣದಲ್ಲಿ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಥೆ, ಕಾದಂಬರಿಕಾರರಾಗಿ, ನಟ ನಾಟಕಕರ್ತರಾಗಿ, ತಮ್ಮ ಐದು ದಶಕಗಳ ಬದುಕಿನಲ್ಲಿ ಬಹುಮುಖ ಪ್ರತಿಭೆಯಿಂದ ಕನ್ನಡ ಹಾಗೂ ತುಳು ಭಾಷೆ ಗಳೆರಡರಲ್ಲೂ ಕಲಾ ಸೇವೆ ಮಾಡಿ ಅಲ್ಪ ಆಯುಷ್ಯದಲ್ಲೇ ಸಂದು ಹೋದ ವಿಶುಕುಮಾರರ ಗೌರವಾರ್ಥವಾಗಿ ಯುವವಾಹಿನಿ ಸಂಸ್ಥೆಯ ವತಿಯಿಂದ ಶುಕುಮಾರ್ ಪ್ರಶಸ್ತಿ ನೀಡಲಾಗುತ್ತಿದೆ.
ಯುವವಾನಿ ಸಂಸ್ಥೆಯು ಕಳೆದ 15 ವರ್ಷಗಳಿಂದ ವಿಶುಕುಮಾರ್ ಪ್ರಶಸ್ತಿ ನೀಡುತ್ತಾ ಬಂದಿದೆ. 2017ನೆ ಸಾಲಿನ ವಿಶುಕುಮಾರ್ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಬಿ.ಎಮ್.ರೋಹಿಣಿ ಇವರಿಗೆ ನೀಡಿ ಗೌರಸಲಾಗುವುದು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಯು.ಎಸ್.ಮಲ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಂಘಟಕಿ ಕೆ.ಎ.ರೋಹಿಣಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಖ್ಯಾತ ರಂಗಕರ್ಮಿ ವಿ.ಜಿ.ಪಾಲ್ ಮುಖ್ಯ ಅತಿಥಿಯಾಗಿ ಭಾಗಹಿವಸಲಿದ್ದಾರೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







