ಜೂ.17ರಂದು ಬಿನ್ನಿಪೇಟೆ ವಾರ್ಡ್ ಚುನಾವಣೆ
ಬೆಂಗಳೂರು, ಮೇ 29: ಗಾಂಧಿನಗರದ ಬಿನ್ನಿಪೇಟೆ ವಾರ್ಡ್-122ರ ಮರು ಚುನಾವಣೆ ಜೂ.17ರಂದು ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ.
ಜೂ.17ರಂದು ನಡೆಯುವ ಚುನಾವಣೆಗೆ ಇಂದು(ಮೇ 30) ಅಧಿಸೂಚನೆ ಪ್ರಕಟವಾಗಲಿದ್ದು, ಜೂ.6ರ ವರೆಗೆ ನಾಮಪತ್ರ ಸಲ್ಲಿಕೆ ಮಾಡಬಹುದು. ಅಂದೇ ಕೊನೆಯ ದಿನವಾಗಿದ್ದು, ಜೂ.7ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂ.9ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
ಜೂ. 17ರಂದು ಚುನಾವಣೆ ನಡೆದು ತಾಂತ್ರಿಕ ಕಾರಣ ಎದುರಾದರೆ ಮರುದಿನ ಮರು ಚುನಾವಣೆ ನಡೆಯಲಿದ್ದು, ಜೂ.19ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಮಹದೇವಮ್ಮ: ಗಾಂಧಿನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಬಿನ್ನಿಪೇಟೆ ವಾರ್ಡ್‌ನಿಂದ ಮಹದೇವಮ್ಮ ನಾಗರಾಜ್ ಕಾಂಗ್ರೆಸ್‌ನಿಂದ ಆರಿಸಿಬಂದಿದ್ದರು. ಆದರೆ, ಇತ್ತೀಚೆಗೆ ತಿರುಪತಿ ಪ್ರವಾಸ ಕೈಗೊಂಡಿದ್ದಾಗ ಮಹದೇವಮ್ಮ(44) ಹೃದಯಾಘಾತದಿಂದ ನಿಧನರಾಗಿದ್ದರು. ಹೀಗಾಗಿ, ಮರು ಚುನಾವಣೆ ನಡೆಯಲಿದೆ.
Next Story





