ಪಡುಬಿದ್ರೆ: ವಿದ್ಯಾರ್ಥಿನಿ ನೀರುಪಾಲು
ಓರ್ವಳ ರಕ್ಷಣೆ, ಮತ್ತೊಬ್ಬಳು ನಾಪತ್ತೆ
ಪಡುಬಿದ್ರೆ, ಮೇ 29: ಪಾದೆಬೆಟ್ಟು ಪಟ್ಲ ಎಂಬಲ್ಲಿ ಇಂದು ಸುರಿದ ನಿರಂತರ ಮಳೆಗೆ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ನಡೆದಿದೆ.
ಪಡುಬಿದ್ರೆ ಗಣಪತಿ ಶಾಲೆಯ ನಾಲ್ಕನೆಯ ತರಗತಿ ವಿದ್ಯಾರ್ಥಿನಿ ನಿಧಿ ತನ್ನ ಅಕ್ಕ ನಿಶಾ ಜೊತೆ ಪಟ್ಲ ಕಿರುಸೇತುವೆ ದಾಟುತ್ತಿದ್ದ ವೇಳೆ ನೀರು ಸೇತುವೆ ಮೇಲೆ ಹರಿಯುವ ರಭಸಕ್ಕೆ ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.
ನಿಶಾಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ನೀರು ಪಾರಾದ ನಿಧಿ ಪತ್ತೆಯಾಗಿಲ್ಲ. ಪಡುಬಿದ್ರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
Next Story





