ವಿಶ್ವಕಪ್‌ನಲ್ಲಿ ಆಡಲು ಜರ್ಮನಿಯ ಗೋಲ್ ಕೀಪರ್ ನುಯೆರ್ ತಯಾರಿ

ಮಾಸ್ಕೋ, ಮೇ 29: ಜರ್ಮನಿಯ ಗೋಲ್ ಕೀಪರ್ ಮ್ಯಾನುಯೆಲ್ ನುಯೆರ್ ಅವರು ಜೂನ್ 14ರಂದು ಆರಂಭವಾಗಲಿರುವ ಫಿಫಾ ವಿಶ್ವಕಪ್‌ನಲ್ಲಿ ತಂಡಕ್ಕೆ ಮರಳಲು ತಯಾರಿ ನಡೆಸಿದ್ದಾರೆ.
ವಿಶ್ವಕಪ್ ವಿಜೇತ ತಂಡದ ಸದಸ್ಯ ನುಯೆರ್ ಕಳೆದ ಎಂಟು ವರ್ಷಗಳಿಂದ ಜರ್ಮನಿ ತಂಡದ ಸದಸ್ಯರಾಗಿದ್ದಾರೆ. ಆದರೆ ಕಾಲು ನೋವಿನಿಂದಾಗಿ ಕಳೆದ ಸೆಪ್ಟಂಬರ್‌ನಿಂದ ತಂಡದ ಪರ ಒಂದು ಪಂದ್ಯವನ್ನೂ ಆಡಿರಲಿಲ್ಲ. ಉತ್ತರ ಇಟಲಿಯ ಎಪ್ಪಾನ್ ತರಬೇತಿ ಶಿಬಿರದಲ್ಲಿ ನುಯೆರ್ ತರಬೇತಿ ನಡೆಸುತ್ತಿದ್ದಾರೆ.
ಶನಿವಾರ ನಡೆಯಲಿರುವ ಅಸ್ಟ್ರೀಯಾ ತಂಡದ ವಿರುದ್ಧದ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ನುಯೆರ್ ಆಡಲಿದ್ದಾರೆ.
‘‘ವಿಶ್ವಕಪ್ ವೇಳೆಗೆ ನುಯೆರ್ ಫಿಟ್‌ನೆಸ್ ಸಮಸ್ಯೆಯಿಂದ ಹೊರಬಂದು ತಂಡದ ಪರ ಆಡುವುದನ್ನು ನಿರೀಕ್ಷಿಸಲಾಗಿದೆ’’ ಎಂದು ತಂಡದ ಗೋಲ್‌ಕೀಪಿಂಗ್ ಕೋಚ್ ಆ್ಯಂಡ್ರೆಸ್ ಕೊಯೆಪ್ಕೆ ತಿಳಿಸಿದ್ದಾರೆ.
32ರ ಹರೆಯದ ಜರ್ಮನಿಯ ನಾಯಕ ನುಯೆರ್ ಸೋಮವಾರ ನಡೆದ ಅಂಡರ್-20 ತಂಡದಲ್ಲಿ ಸುಮಾರು ಅರ್ಧ ಗಂಟೆ ಆಡಿದ್ದರು. ಇನ್ನೂ ಅರ್ಧ ಗಂಟೆ ಕಾಲ ಬುಧವಾರ ಆಡಲಿದ್ದಾರೆ.
ಜೂನ್ 5ರ ತನಕ ಇಟಲಿಯಲ್ಲಿ ನುಯೆರ್ ಉಳಿಯಲಿದ್ದಾರೆ. ಜೂ. 4ರ ಮೊದಲು 23 ಸದಸ್ಯರ ತಂಡ ಪ್ರಕಟವಾಗಲಿದೆ. ತರಬೇತಿ ಶಿಬಿರದಲ್ಲಿ ಒಟ್ಟು 27 ಆಟಗಾರರಿದ್ದಾರೆ. ಓರ್ವ ಗೋಲು ಕೀಪರ್ ಸೇರಿದಂತೆ ನಾಲ್ವರು ಆಟಗಾರರು ನಾಲ್ವರನ್ನು ಕೈ ಬಿಡಬೇಕಾಗಿದೆ. ಕೋಚ್ ಜೋಕಿಮ್ ಲೋವ್ ಅಂತಿಮ 23 ಸದಸ್ಯರ ತಂಡದ ಆಯ್ಕೆಗೆ ಕಸರತ್ತು ನಡೆಸುತ್ತಿದ್ದಾರೆ.
ನುಯೆರ್ ಫಿಟ್‌ನೆಸ್ ಸಮಸ್ಯೆಯಿಂದ ಪಾರಾದರೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಬಹುದು. ನುಯೆರ್ ಪ್ರಥಮ ಪ್ರಾಶಸ್ತ್ಯದ ಕೀಪರ್ ಆಗಿದ್ದಾರೆ. ಇವರ ಜೊತೆ ತಂಡದಲ್ಲಿ ಸ್ಥಾನಕ್ಕಾಗಿ ಕೆವಿನ್ ಟ್ರಾಪ್, ಮಾರ್ಕ್-ಆ್ಯಂಡ್ರೆ ಟೆರ ಸ್ಟೆಗೆನ್ ಮತ್ತು ಬರ್ನಾಡ್ ಲೆನೊ ಪೈಪೋಟಿ ನಡೆಸುತ್ತಿದ್ದಾರೆ. ಪೂರ್ವಭಾವಿ ತಂಡದಲ್ಲಿ ನುಯೆರ್ ಅವಕಾಶ ಪಡೆದಿದ್ದಾರೆ.
ಮಾರ್ಕ್ ಕಳೆದ ವರ್ಷ ಕಾನ್ಫೆಡರೇಶನ್ ಕಪ್ ತಂಡದಲ್ಲಿದ್ದರು. ಬಾರ್ಸಿಲೋನಾ ತಂಡದಲ್ಲಿ ಮಿಂಚಿದ್ದರು. ಅವರು ತಂಡದಲ್ಲಿ ಅವಕಾಶ ಪಡೆಯುವುದನ್ನು ನಿರೀಕ್ಷಿಸಲಾಗಿದೆ ಎಂದು ಕೋಚ್ ಜೋಕಿಮ್ ಸುಳಿವು ನೀಡಿದ್ದಾರೆ.
ಜರ್ಮನಿ ತಂಡ ಅಭ್ಯಾಸ ಪಂದ್ಯದಲ್ಲಿ ಜೂನ್ 8ರಂದು ಸೌದಿ ಅರೇಬಿಯಾ ತಂಡವನ್ನು ಎದುರಿಸಲಿದೆ. ಜರ್ಮನಿ ತಂಡ ವಿಶ್ವಕಪ್‌ನ ಎಫ್’ ಗುಂಪಿನಲ್ಲಿ ಮೆಕ್ಸಿಕೊ, ಸ್ವೀಡನ್, ದಕ್ಷಿಣ ಕೊರಿಯಾ ತಂಡದ ಜೊತೆ ಸ್ಥಾನ ಪಡೆದಿದೆ.ಜೂ.17ರಂದು ಜರ್ಮನಿ ತನ್ನ ಮೊದಲ ಪಂದ್ಯದಲ್ಲಿ ಮೆಕ್ಸಿಕೊ ತಂಡವನ್ನು ಎದುರಿಸಲಿದೆ.







