ಪ್ರಥಮ ಪಿಯುಸಿ ದಾಖಲಾತಿ ವಿಸ್ತರಣೆ
ಬೆಂಗಳೂರು, ಮೇ 30: 2018-19ನೆ ಶೈಕ್ಷಣಿಕ ಸಾಲಿನ ಸಿಬಿಎಸ್‌ಇ 10ನೆ ತರಗತಿ ಫಲಿತಾಂಶ ತಡವಾದ ಬಂದಿರುವ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ತರಗತಿ ದಾಖಲಾತಿಯ ದಿನಾಂಕವನ್ನು ವಿಸ್ತರಿಸಲಾಗಿದೆ.
ದಂಡ ಶುಲ್ಕವಿಲ್ಲದೆ ಜೂ.12ರವರೆಗೆ ದಾಖಲಾತಿ ಪಡೆಯಬಹುದು. 670 ರೂ.ದಂಡದೊಂದಿಗೆ ಜೂ.23ರವರೆಗೆ ದಾಖಲಾತಿಗೆ ಅವಕಾಶವಿದೆ. ಹಾಗೂ 2,890 ರೂ.ವಿಶೇಷ ದಂಡ ಶುಲ್ಕದೊಂದಿಗೆ ಜೂ.25ರಿಂದ 30ರವರೆಗೆ ದಾಖಲಾಗಬಹುದೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
Next Story





