ಇಂಡೋನೇಷ್ಯಾ ಪ್ರಜೆಗಳಿಗೆ 30 ದಿನಗಳ ಉಚಿತ ವೀಸಾ ಘೋಷಿಸಿದ ಪ್ರಧಾನಿ ಮೋದಿ

ಜಕಾರ್ತ, ಮೇ 30: ಇಂಡೋನೇಷ್ಯಾ ಪ್ರಜೆಗಳಿಗೆ 30 ದಿನಗಳ ಉಚಿತ ವೀಸಾ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಇಲ್ಲಿ ಘೋಷಿಸಿದರು. ಅಂತೆಯೇ ಭಾರತೀಯ ಮೂಲದ ನಾಗರಿಕರು ತಮ್ಮ ಮೂಲ ದೇಶಕ್ಕೆ ಪ್ರವಾಸ ಕೈಗೊಂಡು 'ನವಭಾರತ'ದ ಅನುಭವ ಪಡೆಯುವಂತೆ ಕರೆ ನೀಡಿದರು.
ಜಕಾರ್ತ ಕನ್ವೆನ್ಷನ್ ಸೆಂಟರ್‍ನಲ್ಲಿ ಭಾರತೀಯ ಮೂಲದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, "ಇಂಡಿಯಾ ಹಾಗೂ ಇಂಡೋನೇಷ್ಯಾ ಎನ್ನುವ ಹೆಸರಿನಲ್ಲಿ ಪ್ರಾಸವಿದ್ದಂತೆ ಉಭಯ ದೇಶಗಳ ನಡುವಿನ ಬಾಂಧವ್ಯ ಕೂಡಾ ವಿಶಿಷ್ಟ" ಎಂದು ಬಣ್ಣಿಸಿದರು.
"ನಿಮ್ಮಲ್ಲಿ ಬಹಳಷ್ಟು ಮಂದಿ ಭಾರತಕ್ಕೆ ಬಂದಿರಲಾರಿರಿ. ಮುಂದಿನ ವರ್ಷದ ಕುಂಭ ಪ್ರಯಾಗಕ್ಕೆ ನಿಮ್ಮೆಲ್ಲರನ್ನೂ ಆಹ್ವಾನಿಸುತ್ತಿದ್ದೇನೆ" ಎಂದು ಮೋದಿ ಹೇಳಿದರು.
ಹಿಂದೆ ಆಡಳಿತ ನಡೆಸಿದ ಸರ್ಕಾರಗಳ ಮೇಲೆ ವಾಗ್ದಾಳಿ ನಡೆಸಿದ ಮೋದಿ, "ನನ್ನ ಮೊದಲ ಆದ್ಯತೆ ದೇಶವನ್ನು ಭ್ರಷ್ಟಾಚಾರಮುಕ್ತ, ಜನಕೇಂದ್ರಿತ ಮತ್ತು ಅಭಿವೃದ್ಧಿ ಸ್ನೇಹಿಯನ್ನಾಗಿ ಮಾಡುವುದು" ಎಂದು ಹೇಳಿದರು.
Next Story





