ಬಡಗಕಜೆಕಾರು: ಶಾಸಕ ರಾಜೇಶ್ ನಾಯ್ಕರಿಗೆ ಸನ್ಮಾನ

ಬಂಟ್ವಾಳ, ಮೇ 30: ಬಡಗಕಜೆಕಾರುನಲ್ಲಿ ಬುಧವಾರ ನಡೆದ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ರಾಜೇಶ್ ನಾಯ್ಕೆ ಉಳಿಪ್ಪಾಡಿಯರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಕ್ಷೇತ್ರ ಕಾರ್ಯದರ್ಶಿ ರಂಜಿತ್ ಮೈರ, ಗ್ರಾಪಂ ಅಧ್ಯಕ್ಷ ವಜ್ರ ಪೂಜಾರಿ, ಗ್ರಾಮ ಸಮಿತಿ ಅಧ್ಯಕ್ಷ ವಾಸು ದೇವಾಡಿಗ, ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಅಬುರ, ಕಜೆಕಾರು ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ದಿನೇಶ್ ಜೆಂಕ್ಯಾರ್, ಕಜೆಕಾರು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕಿ ಸೀತಮ್ಮ, ಗ್ರಾಪಂ ಸದಸ್ಯೆ ಶೋಭಾ, ಪ್ರವೀಣ್ ಗೌಡ, ಪ್ರಮೋದ್ ಬಾರೆದೊಟ್ಟು, ಪ್ರೇಮಾನಂದ, ಪ್ರಕಾಶ್ ಕರ್ಲ ಉಪಸ್ಥಿತರಿದ್ದರು. ಹರೀಶ್ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.
Next Story





