ಬೆಂಗಳೂರು: ದಡೋಡೆ ಪ್ರಕರಣ 7 ಆರೋಪಿಗಳ ಬಂಧನ

ಬೆಂಗಳೂರು, ಮೇ 30: ಐಷಾರಾಮಿ ಜೀವನಕ್ಕಾಗಿ ದರೋಡೆ ಮಾಡುತ್ತಿದ್ದ ಏಳು ಜನ ಆರೋಪಿಗಳನ್ನು ಬಂಧಿಸುವಲ್ಲಿ ಮಹಾಲಕ್ಷ್ಮೀಲೇಔಟ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಕತ್ರಿಗುಪ್ಪೆಯ ಕಿರಣ್(23), ಹಾರೋಹಳ್ಳಿ ಪುನೀತ್(25), ಟಿ.ಜಿ.ಲೇಔಟ್ ಸುನೀಲ್, ನವೀನ್(19), ಸಾಗರ್, ಪುರುಷೋತ್ತಮ, ವರುಣ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಹಿಂಭಾಗದ ರಸ್ತೆಯಲ್ಲಿ ಎರ್ಟಿಗಾ ಕಾರಿನಲ್ಲಿ ಹೋಗುವಾಗ ಮೂರು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಶ್ರೀನಿವಾಸ್ ಗುಪ್ತಾ ಎಂಬುವರ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿ 22.15 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಮೇ 14ರಂದು ದೂರು ದಾಖಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳ ವಶದಿಂದ 13.66 ಲಕ್ಷ ನಗದು, ಎರಡು ಬೈಕ್ ವಶಕ್ಕೆ ಪಡೆದು ಇಲ್ಲಿನ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Next Story





