Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ‘ತಂಬಾಕು ಸೇವನೆಯಿಂದ ಕೋಟ್ಯಂತರ ಜೀವ...

‘ತಂಬಾಕು ಸೇವನೆಯಿಂದ ಕೋಟ್ಯಂತರ ಜೀವ ಅಪಾಯದಂಚಿನಲ್ಲಿದೆ’

ವಿಶ್ವ ತಂಬಾಕು ದಿನ

ವಾರ್ತಾಭಾರತಿವಾರ್ತಾಭಾರತಿ30 May 2018 9:05 PM IST
share

ಬೆಂಗಳೂರು, ಮೇ 30: ತಂಬಾಕು ಸೇವನೆ ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯದ ಅಪಾಯಗಳಲ್ಲೊಂದಾಗಿದ್ದು, ಕೋಟ್ಯಂತರ ಜನರು ಅಪಾಯದ ಅಂಚಿನಲ್ಲಿದ್ದಾರೆ ಎಂದು ವೈದ್ಯರು ವಿಶ್ಲೇಷಿಸಿದ್ದಾರೆ.

ಧೂಮಪಾನದಿಂದಾಗಿ ಪ್ರತಿವರ್ಷ 6 ದಶಲಕ್ಷ ಜನರು ಪ್ರಾಣ ತ್ಯಜಿಸುತ್ತಿದ್ದಾರೆ. ಅಲ್ಲದೆ, ತಮ್ಮದಲ್ಲದ ತಪ್ಪಿನಿಂದಾಗಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೂ, ಜನರು ಧೂಮಪಾನ ಮಾಡುವುದನ್ನು ನಿಲ್ಲಿಸಿಲ್ಲ. 4 ಜನರಲ್ಲಿ ಒಬ್ಬರು ನಿರಂತರ ಧೂಮಪಾನಿಗಳು ಸಿಒಪಿಡಿ ಪಡೆಯುವ ಅಪಾಯವನ್ನು ಹೊಂದಿದ್ದಾರೆ. ಶೇ.40 ರಷ್ಟು ಧೂಮಪಾನಿಗಳು ದೀರ್ಘಕಾಲಿಕ ಬ್ರಾಂಖೈಟಿಸ್ ಪೀಡಿತರಾಗಿದ್ದು, ಅದರಲ್ಲಿ ಅರ್ಧದಷ್ಟು ಜನರು ಸಿಒಪಿಡಿಗೆ ತುತ್ತಾಗುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಇಂದು ತಂಬಾಕು ಬಳಸುವವರಲ್ಲಿ ತಂಬಾಕಿನ ಹೊಗೆಯ ಸೇವೆನೆಯ ಪ್ರಮಾಣವು ಶೇ.35.1ರಷ್ಟಿದ್ದು, 7000ಕ್ಕೂ ಹೆಚ್ಚು ರಾಸಾಯನಿಕಗಳ ಅಪಾಯಕ್ಕೆ ಒಡ್ಡಿ, ಇವುಗಳಲ್ಲಿ 250 ಮತ್ತು ಸುಮಾರು 69 ರಾಸಾಯನಿಕಗಳು ಅನುಕ್ರಮವಾಗಿ ಅಪಾಯಕಾರಿ ಮತ್ತು ಕ್ಯಾನ್ಸರ್‌ ಕಾರಕವೆಂದು ಸಾಬೀತಾಗಿದೆ. ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಭಾರತದಲ್ಲಿ ಎಲ್ಲಾ ಕ್ಯಾನ್ಸರ್‌ಗಳಿಗಿಂತ ಶೇ.30 ಕ್ಕೂ ಹೆಚ್ಚು ಪ್ರಮಾಣವನ್ನು ಹೊಂದಿದೆ ಎಂದು ಹೇಳಲಾಗಿದೆ.

ವೈದ್ಯ ಡಾ.ಬಿ.ಮುರಳಿ ಮೋಹನ್ ಪ್ರಕಾರ, ನಿಕೋಟಿನ್‌ಗೆ ದೈಹಿಕ ವ್ಯಸನದಿಂದಾಗಿ ಧೂಮಪಾನವನ್ನು ಬಿಡುವುದು ಕಷ್ಟಕರವಾಗಿದ್ದು, ಬಲವಾದ ದೈಹಿಕ ಹಂಬಲವನ್ನು ಪ್ರಚೋದಿಸುತ್ತದೆ. ಆದರೆ, ಈ ಲಕ್ಷಣಗಳನ್ನು ಮತ್ತು ಹಂಬಲವನ್ನು ನಿಯಂತ್ರಿಸಲು ಸಹಾಯಕವಾಗುವ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿದ್ದು, ಅದರಿಂದ ಜೀವನದ ಗುಣಮಟ್ಟದಲ್ಲಿ ಮತ್ತು ದೈನಂದಿನ ಲಕ್ಷಣಗಳಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದ್ದಾರೆ.

ನಿರಂತರವಾಗಿ ಧೂಮಪಾನ ಮಾಡುವ ಸ್ತ್ರೀಯರು ಪುರುಷರಿಗೆ ಹೋಲಿಸಿದಂತೆ, ಅವರು ಸೇದುವ ಸಿಗರೆಟ್‌ಗಳಿಗೆ ಹೆಚ್ಚು ಬೇಗನೆ ತಮ್ಮ ಶ್ವಾಸಕೋಶದ ಕ್ರಿಯೆಗಳಲ್ಲಿ ಕ್ಷೀಣತೆ ಕಂಡು ಬರುತ್ತದೆ. ಆದರೆ, ಪುರುಷರಿಗೆ ಹೋಲಿಸಿದಂತೆ, ಅವರು ಧೂಮಪಾನ ನಿಲ್ಲಿಸಿದಾಗ, ಶ್ವಾಸಕೋಶದ ಕ್ರಿಯೆಯಲ್ಲಿ ಹೆಚ್ಚು ಲಾಭಗಳನ್ನೂ ಕಾಣುತ್ತಿದ್ದಾರೆ. ನಿಕೋಟಿನ್ ಬದಲಿ ಚಿಕಿತ್ಸೆಯು (ಎನ್‌ಆರ್‌ಟಿ) ಧೂಮಪಾನಿಗಳು ಧೂಮಪಾನವನ್ನು ತ್ಯಜಿಸಲು ಸಹಾಯಕವಾಗುವ ಪರಿಣಾಕಾರಿ ಚಿಕಿತ್ಸೆ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಹಳಷ್ಟು ಸಿಗರೆಟ್‌ಗಳಲ್ಲಿ ಕಂಡುಬರುವ ನಿಕೋಟಿನ್‌ನ 1/3 ಅಥವಾ ಅರ್ಧ ಪ್ರಮಾಣದ ನಿಕೋಟಿನ್ ಅದರಲ್ಲಿರುತ್ತದೆ. ಇದು ಒಂದು ಅತ್ಯುತ್ತಮ ಆಯ್ಕೆ ಮತ್ತು ಇದನ್ನು ಪ್ರೋ ಧೂಮಪಾನ ಮಾಡದೇ ನಿಮ್ಮ ರಕ್ತದಲ್ಲಿ ನಿಕೋಟಿನ್ ಅನ್ನು ಸೇರಿಸುವ ಒಂದು ವಿಧಾನವಾಗಿದೆ. ಅಲ್ಲದೆ, ಕೆಲವು ನಿಕೋಟಿನ್ ಗಂ, ಪ್ಯಾಚ್, ಇನ್ಹೇಲರ್ಸ್, ಟ್ಯಾಬ್ಲೆಟ್, ಕೊಜೆನ್ಜಸ್ ಮತ್ತು ಸ್ಪ್ರೇಗಳೂ ಸಿಗುತ್ತವೆ. ಬಹಳಷ್ಟು ವೈದ್ಯಕೀಯ ಪರೀಕ್ಷೆಗಳ ಪ್ರಕಾರ ನೆರವಿಲ್ಲದೆ ಧೂಮಪಾನಕ್ಕೆ ಹೋಲಿಸಿದಂತೆ ಎನ್‌ಆರ್‌ಟಿಯು ಧೂಮಪಾನವನ್ನು ತ್ಯಜಿಸುವ ಸಾಧ್ಯತೆಯನ್ನು ಶೇ.50-70ರಷ್ಟು ಹೆಚ್ಚಿಸುತ್ತದೆ.

ಶ್ವಾಸಕೋಶ ರೋಗ ಮತ್ತು ಕ್ಯಾನ್ಸರ್ ಸೇರಿದಂತೆ, ತಂಬಾಕು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಆರೋಗ್ಯದ ಮೇಲೆ ಧೂಮಪಾನದ ದುಷ್ಪರಿಣಾಮಗಳ ನಮ್ಮ ತಿಳುವಳಿಕೆ ಹೆಚ್ಚುತ್ತಿದ್ದಂತೆ ಈ ಆರೋಗ್ಯದ ಪರಿಣಾಮಗಳು ಅಮಾಯಕ ಸುತ್ತಮುತ್ತಲಿನವರಿಗೂ ವಿಸ್ತರಿಸಿದೆ. ಹೀಗಾಗಿ, ಧೂಮಪಾನವನ್ನು ತ್ಯಜಿಸಲು ಸಿದ್ದವಾಗಿದ್ದಲ್ಲಿ, ನಿಮ್ಮ ವೈದ್ಯರೊಂದಿಗೆ ಮಾತನಾಡಿ, ನಿಕೋಟಿನ್‌ನೊಂದಿಗಿನ ನಿಮ್ಮ ವ್ಯಸನವನ್ನು ಶಮನ ಮಾಡಿಕೊಳ್ಳಿ ಎಂದು ವೈದ್ಯ ಮುರಳಿ ಮೋಹನ್ ಸಲಹೆ ನೀಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X