ಕೆಲಸದ ಕಡೆ ಸುರಕ್ಷೆ, ಆರೋಗ್ಯಕ್ಕಾಗಿ ಫಝಿಲ್ಸ್ ಕ್ರಿಯೇಶನ್‌ಗೆ ಯೂರೋಪ್ ಸಂಸ್ಥೆಯಿಂದ ಪ್ರಮಾಣ ಪತ್ರ

ಮಂಗಳೂರು, ಮೇ 30: ಆರೋಗ್ಯಕರ ಉದ್ಯೋಗ ಸ್ಥಳಗಳು ಅಭಿಯಾನ 2018-19ರಲ್ಲಿ ಯಶಸ್ವಿಯಾಗಿ ಭಾಗವಹಿಸಿದ ಮೂಸಾ ಫಝಿಲ್ ಅವರ ಗ್ರಾಫಿಕ್ ಡಿಸೈನಿಂಗ್ ಮತ್ತು ಮುದ್ರಣ ಸಂಸ್ಥೆಗೆ ಯೂರೋಪ್ ಸಂಸ್ಥೆಯು ಕೆಲಸದ ಸ್ಥಳದಲ್ಲಿ ಸುರಕ್ಷೆ ಮತ್ತು ಆರೋಗ್ಯಕ್ಕಾಗಿ ಪ್ರಮಾಣ ಪತ್ರವನ್ನು ನೀಡಿದೆ.
ಈಗಾಗಲೇ ಅವರು ಎಸ್‌ಇಬಿಯ ವಿಶೇಷ ಚಟುವಟಿಕೆಗಳಿಗಾಗಿ ಪ್ರಶಸ್ತಿ, ಯುಎಫ್‌ಬಿಎಂನ ಪ್ರಶಂಸಾ ಪತ್ರ, ಎಚ್‌ಐಎಫ್‌ನ ಪ್ರಶಂಸಾ ಪತ್ರ, ಗೂಗಲ್‌ನ ಪ್ರಮಾಣ ಪತ್ರ, ಫೇಸ್‌ಬುಕ್ ಪ್ರಮಾಣ ಪತ್ರ, ನಿಖಾಪಾರ್ಟ್‌ನರ್.ಕಾಮ್‌ನಿಂದ ಶುಭಾಶಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅವರು ಮುಹಮ್ಮದ್ ಸಲೀಂ ಮತ್ತು ಅಮಿನಾ ಅವರ ಹಿರಿಯ ಪುತ್ರನಾಗಿದ್ದಾರೆ. ಮೂಸಾ ಫಝಿಲ್ ಭಾರತದ ಅತ್ಯಂತ ಕಿರಿಯ ಸಿಇಒಗಳಲ್ಲಿ ಒಬ್ಬರಾಗಿ ದ್ದಾರೆ. ಗೂಗಲ್ ಮತ್ತು ಫೇಸ್‌ಬುಕ್‌ನಿಂದ ಪ್ರಮಾಣ ಪತ್ರ ಪಡೆದ ಮಂಗಳೂರಿನ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.
Next Story





