ಪೆರ್ಡೂರು ಪ್ರಕರಣ: ತನಿಖೆಗೆ ಪಿಎಫ್‌ಐ ಆಗ್ರಹ
ಉಡುಪಿ, ಮೇ 30: ಪೆರ್ಡೂರಿನಲ್ಲಿ ದನದ ವ್ಯಾಪಾರಿ ಹುಸೈನಬ್ಬರ ಸಂಶಯಾಸ್ಪದ ಸಾವಿನ ಪ್ರಕರಣದ ಬಗ್ಗೆ ಪೋಲೀಸ್ ಇಲಾಖೆಯು ಸೂಕ್ತ ತನಿಖೆ ನಡೆಸಿ, ಘಟನೆಯ ಸತ್ಯಾಸತ್ಯತೆಯನ್ನು ಬಯಲು ಮಾಡಿ ತಪ್ಪಿತಸ್ಥರ ವಿರುಧ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
ಶಾಂತವಾಗಿರುವ ಕರಾವಳಿಯಲ್ಲಿ ಮತ್ತೆ ಕೋಮು ಸಾಮರಸ್ಯವನ್ನು ಕದಡದಂತೆ ಸೂಕ್ತ ಕ್ರಮ ಕೈಗೋಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿಭಾಗೀಯ ಅಧ್ಯಕ್ಷ ಬಶೀರ್ ಅಂಬಾಗಿಲು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
Next Story





