ಸಿಬಿಎಸ್‌ಇ: ಪ್ರೆಸ್ಟೀಜ್ ಶಾಲೆಗೆ ಶೇ. 100 ಫಲಿತಾಂಶ

ಮಂಗಳೂರು, ಮೇ 30: ಪ್ರಸಕ್ತ ಶೈಕ್ಷಣಿಕ ವರ್ಷದ ಸಿಬಿಎಸ್‌ಇ 10ನೆ ತರಗತಿಯಲ್ಲಿ ಶೇ.100 ಫಲಿತಾಂಶವನ್ನು ಪಡೆಯುವುದರೊಂದಿಗೆ ಮಂಗಳೂರು ಜಪ್ಪಿನಮೊಗರಿನ ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಶಾಲೆ ಸತತವಾಗಿ 4ನೆ ಬಾರಿ ಶೇ. 100 ಫಲಿತಾಂಶ ದಾಖಲಿಸಿದೆ.
ಸಂಸ್ಥೆಯ ಅಧ್ಯಕ್ಷ ಹೈದರ್ ಅಲಿ ಅವರು ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ ಹಾಗೂ ಇದಕ್ಕೆ ಕಾರಣಕರ್ತರಾದ ಸಂಸ್ಥೆಯ ಪ್ರಾಂಶುಪಾಲ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳನ್ನೂ, ಪೋಷಕರನ್ನೂ ಅಭಿನಂದಿಸಿದ್ದಾರೆ.
ಆರಂಭದ ದಿನಗಳಿಂದಲೇ ಪ್ರೆಸ್ಟೀಜ್ ಶಾಲೆ ಮಕ್ಕಳಿಗೆ ಮೌಲ್ಯಯುತ ಹಾಗೂ ಕೌಶಲ್ಯಾಭಿವೃದ್ಧಿಯ ಶಿಕ್ಷಣವನ್ನು ನೀಡುತ್ತಾ ಬಂದಿರುವುದು ಈ ಸಾಧನೆಗೆ ಪ್ರಮುಖ ಕಾರಣ ಎಂದವರು ಹೇಳಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲು ಇದು ಸ್ಪೂರ್ತಿಯಾಗಲಿದೆ ಹೈದರ್ ಅಲಿ ಹಾರೈಸಿದ್ದಾರೆ.
Next Story





