ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಮಂಕಿ ಮೇಹೆಮ್ ಕ್ಲಬ್ ತಂಡ ದ್ವಿತೀಯ

ಮಂಗಳೂರು, ಮೇ 31: ಜಮ್ಮುಕಾಶ್ಮೀರದಲ್ಲಿ ಇತ್ತೀಚೆಗೆ (ಕಳೆದ ಎಪ್ರಿಲ್ 20 ರಿಂದ 23 ) ನಡೆದ ಮುವಥಾಯಿ ಇಂಡಿಯಾ ನ್ಯಾಶನಲ್ ಫೆಡರೇಶನ್ ಕಪ್‌ಕ್ರೀಡಾ ಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಮಂಗಳೂರಿನ ಮಂಕಿ ಮೇಹೆಮ್ ಕ್ಲಬ್ ತಂಡ ದ್ವಿತೀಯ ಸ್ಥಾನ ಪಡೆದಿದೆ.
ಮಂಗಳೂರಿನ ಕ್ಲಬ್‌ನಿಂದ ಭಾಗವಹಿಸಿದ ಒಟ್ಟು 13 ಮಂದಿ ಸದಸ್ಯರು ಕೂಟದಲ್ಲಿ ಭಾಗವಹಿಸಿದ್ದು, ಇದರಲ್ಲಿ 11 ಮಂದಿ ಒಟ್ಟು 13 ಪದಕ ಗೆದ್ದಿದ್ದಾರೆ ಎಂದು ಮುವಥಾಯಿ ಅಸೋಸಿಯೇಶನ್ ಕರ್ನಾಟಕ ಅಧ್ಯಕ್ಷ ರಾಜಗೋಪಾಲ್ ರೈ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟದ ಮಾಹಿತಿ ನೀಡಿದರು.
ಒಂಭತ್ತು ಚಿನ್ನ, ಒಂದು ಬೆಳ್ಳಿ
ನಗರದ ಕ್ರೀಡಾಪಟುಗಳು ಒಟ್ಟು ಒಂಭತ್ತು ಚಿನ್ನ, ಒಂದು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಇದರ ಜತೆಗೆ ಇಬ್ಬರು ಮಹಿಳಾ ಕ್ರೀಡಾಪಟುಗಳು ಗ್ರೌಂಡ್ ಚಾಂಪಿಯನ್ ಮತ್ತು ಬೆಸ್ಟ್ ಫೈಟರ್ ಪ್ರಶಸ್ತಿ ಪಡೆದಿದ್ದಾರೆ.
ಕಳೆದ ಸಾಲಿನಲ್ಲಿ (2016- 17) ಜೈಪುರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನಮ್ಮ ಕ್ರೀಡಾಳುಗಳು ದೇಶದಲ್ಲೇ ಪ್ರಕಮ ಸ್ಥಾನ ಗಲಿಸಿದ್ದರು. 2017, ಮಾರ್ಚ್‌ನಲ್ಲಿ ಥೈಲ್ಯಾಂಡ್ ಜರುಗಿದ ಅಂತಾರಾಷ್ಟ್ರೀಯ ಮುವಥಾಯಿ ಕ್ರೀಡಾಕೂಟದಲ್ಲಿ ನಮ್ಮ ನಾಲ್ಕು ಕ್ರೀಡಾಪಟುಗಳು ಬೆಳ್ಳಿ ಹಾಗೂ ಓರ್ರು ಕಂಚಿನ ಪದಕ ಪಡೆದಿದ್ದರು.
ಪದಕ ವಿಜೇತರು
ಪುರುಷರ ವಿವಿಧ ವಿಭಾಗಗಳಲ್ಲಿ ಶೋಧನ್ ಶೆಟ್ಟಿ (ಕಂಚು), ಲಿಯಾಂಡರ್ ಡಿಸೋಜ (ಬೆಳ್ಳಿ), ಅಂಕುಶ್ ಭಂಡಾರಿ (ಚಿನ್ನ), ಉವೈಝಲಿ ಹಾಲ್ (ಚಿನ್ನ)ನಿತೇಶ್ ಕುಮಾರ್ (ಚಿನ್ನ), ಸುಕೀರ್ತನ್ ಕೆ (ಚಿನ್ನ), ಫರ್ಜಿನ್ ಅಹಮ್ಮದ್ (ಚಿನ್ನ), ಮಹಿಳೆಯರ ವಿವಿಧ ವಿಭಾಗಗಳಲ್ಲಿ ಚೆಲ್ಸಿಯಾ ಕೌರ್ (ಕಂಚು), ಶರೋನ್ ಮ್ಯಾಥ್ಯು (ಕಂಚು), ಅನ್ವಿತಾ ಜೆ.ಆಳ್ವ (ಚಿನ್ನ), ಅನಿಶಾ ಆರ್.ಶೆಟ್ಟಿ (ಚಿನ್ನ) ಪದಕ ಗಳಿಸಿದ್ದಾರೆ.
ಮಹಿಳಾ ಪ್ರೊ ಲೀಗ್ ಫೈಟ್ ವಿಭಾಗದಲ್ಲಿ ಅನ್ವಿತಾ ಜೆ.ಆಳ್ವ (ಚಿನ್ನ) ಮತ್ತು ಅನಿಶಾ ಆರ್. ಶೆಟ್ಟಿ (ಚಿನ್ನ) ಪದಕ ಪಡೆದಿದ್ದಾರೆ.
ಮುವಥಾಯಿ ಅಸೋಸಿಯೇಶನ್ ಚೀಫ್ ಜನರಲ್ ಸೆಕ್ರೆಟರಿ ನಿತೇಶ್ ಚಂದ್ರ ಕುಮಾರ್, ಕೋಶಾಧಿಕಾರಿ ಮನೀಶ್ ಕುಮಾರ್ ಎನ್.ಆಚಾರ್ಯ, ಸಲಹೆಗಾರ ಎಬಿಸಿ ನಾರಾಯಣ, ಜಂಟಿ ಕಾರ್ಯದರ್ಶಿ ಸಚಿನ್ ರಾಜ್ ರೈ ಉಪಸ್ಥಿತರಿದ್ದರು.







