ತಂಬಾಕು ರಹಿತ ದಿನಾಚರಣೆಗೆ ಜೇಡಿ ಮಣ್ಣಿನ ಕಲಾ ಪ್ರಾತ್ಯಕ್ಷಿಕೆ

ಉಡುಪಿ, ಮೇ 31: ವಿಶ್ವ ತಂಬಾಕು ರಹಿತ ದಿನಾಚರಣೆಯಾದ ಗುರುವಾರ ಮೇ 31ರಂದು ತಂಬಾಕಿನಿಂದ ಸಂಭವಿಸುವ ದುಷ್ಪರಿಣಾಮಗಳವನ್ನು ಮನೋಜ್ಞವಾಗಿ ಬಿಂಬಿಸಲು ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಇಂದು ಸಂಜೆ ಜೇಡಿ ಮಣ್ಣಿನ ಕಲಾ ಪ್ರಾತ್ಯಕ್ಷಿಕೆಯನ್ನು ಅಪರ ಜಿಲ್ಲಾಧಿಕಾರಿ ಅನುರಾಧ ಅನಾವರಣಗೊಳಿಸಿದರು.
ಜಿಲ್ಲೆಯನ್ನು ತಂಬಾಕು ಮುಕ್ತವಾಗಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಧೂಮಪಾನದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಒಂದು ಕಲಾಕೃತಿಯ ಮೂಲಕ ಬಿಂಬಿಸಲಾದ ಪ್ರಯತ್ನ ಶ್ಲಾಘನೀಯ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ನಮ್ಮ ಹೃದಯ, ಶ್ವಾಸಕೋಶ ಮತ್ತು ಹೃದಯದ ಕಾಯಿಲೆಗಳ ಕುರಿತು ಕಲಾಕೃತಿಯ ಮೂಲಕ ಅರಿವು ಮೂಡಿಸಲಾಗಿದೆ ಎಂದವರು ನುಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್, ನಗರಸಬೆ ಆಯುಕ್ತ ಜೆ. ಸಿ. ಜನಾರ್ಧನ್, ಡಾ ಪ್ರೇಮಾನಂದ, ಕಲಾವಿದರಾದ ವೆಂಕಿ ಪಲಿಮಾರು, ಶ್ರೀನಾಥ್ ಪಾಲ್ಗೊಂಡರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ವಾಸುದೇವ ಉಪಾಧ್ಯಾಯ ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.





