ಶಿಕ್ಷಕರ, ಪದವೀಧರ ಕ್ಷೇತ್ರ ಚುನಾವಣೆ: ಮತದಾನದ ಅವಧಿ ವಿಸ್ತರಣೆ
ಮಂಗಳೂರು, ಮೇ 31: ಶಿಕ್ಷಕರ ಮತ್ತು ನೈಋತ್ಯ ಪವೀಧರರ ಕ್ಷೇತ್ರಕ್ಕೆ ಜೂ. 8ರಂದು ನಡೆಯುವ ಚುನಾವಣೆಯಲ್ಲಿ ಮತದಾರರಿಗೆ ಮತ ಚಲಾಯಿಸಲು ಎರಡು ತಾಸು ಹೆಚ್ಚುವರಿ ಸಮಯವನ್ನು ವಿಸ್ತರಿಸಿ ಚುನಾವಣಾ ಆಯೋಗ ಆದೇಶಿಸಿದೆ.
ಈ ಹಿಂದೆ ಮತದಾನಕ್ಕೆ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ, ಮುಂಬರುವ ಜೂ. 8ರಂದು ನಡೆಯುವ ಚುನಾವಣೆಯಲ್ಲಿ ಮತದಾರರಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಚುನಾವಣಾ ಆಯೋಗವು ಮತದಾರರಿಗೆ ಮತದಾನ ಮಾಡಲು ಹೆಚ್ಚುವರಿ 2 ಗಂಟೆ ನೀಡಿದಂತಾಗಿದೆ. ಮತದಾನದ ಸಮಯವನ್ನು ವಿಸ್ತರಿಸಬೇಕೆಂದು ಕೆಲವು ರಾಜಕೀಯ ಪಕ್ಷಗಳು ಮಾಡಿರುವ ಮನವಿಯ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ ಎಂದು ಆಯೋಗದ ಪ್ರಕಟನೆ ತಿಳಿಸಿದೆ.
Next Story





