ಸೋಮವಾರಪೇಟೆ: ಬೊಲೆರೋ-ಆಟೋ ಮುಖಾಮುಖಿ ಢಿಕ್ಕಿ; ಓರ್ವ ಮೃತ್ಯು

ಸೋಮವಾರಪೇಟೆ,ಮೇ.31: ಬೊಲೆರೋ ಮತ್ತು ಆಟೋ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಆಟೋ ಚಾಲಕ ಮೃತಪಟ್ಟಿರುವ ಘಟನೆ ಪಟ್ಟಣದ ವಿವೇಕಾನಂದ ಸರ್ಕಲ್ ಬಳಿ ಗುರುವಾರ ರಾತ್ರಿ 8 ಗಂಟೆಗೆ ಸಂಭವಿಸಿದೆ.
ಹೊಸತೋಟ ಗ್ರಾಮದ ಆಟೋ ಚಾಲಕ ಗಣೇಶ(40) ಮೃತಪಟ್ಟವರು, ರಾತ್ರಿ ಪಟ್ಟಣದಿಂದ ಹೊಸತೋಟಕ್ಕೆ ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.
ಸ್ಥಳೀಯರು ಗಾಯಾಳುವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕೈ ಮತ್ತು ಎರಡು ಕಾಲುಗಳು ಮುರಿದಿದ್ದು, ತಲೆಯ ಭಾಗಕ್ಕೂ ಗಾಯಗಳಾಗಿದ್ದವು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿದ್ದ ದಾರಿಮಧ್ಯೆ ಮೃತಪಟ್ಟಿದ್ದಾರೆ. ಕಲ್ಕಂದೂರಿನ ಚನ್ನಕೇಶವ ಎಂಬವರಿಗೆ ಸೇರಿದ ಬೋಲೆರೋ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತರು ಪತ್ನಿ, ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
Next Story





