ನೇಣು ಬಿಗಿದು ಆತ್ಮಹತ್ಯೆ
ಅಜೆಕಾರು, ಮೇ 31: ಕುಕ್ಕಜೆ ಗ್ರಾಮದ ಇಸಾರ್‌ಮಾರ್ ದರ್ಖಾಸ್‌ನ ರಾಜು ಎಂಬವರ ಮಗ ನವೀನ್(22) ಎಂಬವರು ಬುಧವಾರ ಸಂಜೆ 6:30ರ ಸುಮಾರಿಗೆ ತನ್ನ ಮನೆಯಿಂದ ಸ್ವಲ್ಪ ದೂರದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಾವುದೋ ವಿಷಯದಲ್ಲಿ ಮನ ನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಈ ಕೃತ ಎಸಗಿರಬೇಕೆಂದು ಪ್ರಕರಣ ದಾಖಲಿಸಿಕೊಂಡಿರುವ ಅಜೆಕಾರು ಪೊಲೀಸರು ತಿಳಿಸಿದ್ದಾರೆ.
Next Story





