ಸುಟ್ಟಗಾಯಗಳಿಂದ ಮೃತ್ಯು
ಕಾರ್ಕಳ, ಮೇ 31: ಕಳೆದ ಶುಕ್ರವಾರ ಕುಕ್ಕಂದೂರು ಗ್ರಾಮದ ಪಿಲಿಚಂಡಿ ಸ್ತಾನದ ಬಳಿಯ ತನ್ನ ಮನೆಯ ಅಂಗಳದಲ್ಲಿ ಓಲೆಗೆ ಬೆಂಕಿ ಮಾಡುತ್ತಿರುವಾಗ ಅಕಸ್ಮಿಕವಾಗಿ ಮೈಗೆ ಬೆಂಕಿ ಹತ್ತಿಕೊಂಡು ತೀವ್ರ ಸುಟ್ಟಗಾಯಗಳಿಂದ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಪೆರುಮಾಳ್ (40) ಎಂಬವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ 4:30ರ ಸುಮಾರಿಗೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





