ಡೆನ್ಮಾರ್ಕ್: ಮುಖ ಮುಚ್ಚುವ ಬುರ್ಖಾ ಧರಿಸಿದರೆ ದಂಡ

ಕೋಪನ್‌ಹೇಗನ್ (ಡೆನ್ಮಾರ್ಕ್), ಮೇ 31: ಸಾರ್ವಜನಿಕ ಸ್ಥಳಗಳಲ್ಲಿ ಪೂರ್ತಿ ಮುಖ ಮುಚ್ಚುವ ಬುರ್ಖಾ ಧರಿಸುವುದನ್ನು ನಿಷೇಧಿಸುವ ಮಸೂದೆಯೊಂದಕ್ಕೆ ಡೆನ್ಮಾರ್ಕ್ ಸಂಸತ್ತು ಗುರುವಾರ ಅಂಗೀಕಾರ ನೀಡಿದೆ.
‘‘ಸಾರ್ವಜನಿಕ ಸ್ಥಳದಲ್ಲಿ ಮುಖವನ್ನು ಮುಚ್ಚುವ ಬಟ್ಟೆಯನ್ನು ಯಾರಾದರೂ ತೊಟ್ಟರೆ, ಅವರಿಗೆ ದಂಡ ವಿಧಿಸಲಾಗುವುದು’’ ಎಂದು ಈ ಕಾನೂನು ಹೇಳುತ್ತದೆ.
ಮಸೂದೆಯನ್ನು 75-30 ಮತಗಳ ಅಂತರದಿಂದ ಅಂಗೀಕರಿಸಲಾಗಿದೆ.
ಸರಕಾರ ಮಂಡಿಸಿದ ಮಸೂದೆಗೆ ಸೋಶಿಯಲ್ ಡೆಮಾಕ್ರಟಿಕ್ ಪಕ್ಷ ಮತ್ತು ಕಡು ಬಲಪಂಥೀಯ ಡ್ಯಾನಿಶ್ ಪೀಪಲ್ಸ್ ಪಾರ್ಟಿ ಬೆಂಬಲ ನೀಡಿದೆ.
ಕಾನೂನು ಆಗಸ್ಟ್ 1ರಿಂದ ಜಾರಿಗೆ ಬರಲಿದೆ.
ವ್ಯಕ್ತಿಯ ಇಡೀ ಮುಖವನ್ನು ಮುಚ್ಚುವ ಬುರ್ಖಾ ಅಥವಾ ಕಣ್ಣುಗಳನ್ನು ಮಾತ್ರ ತೋರಿಸುವ ನಿಖಾಬ್ ಸಾರ್ವಜನಿಕ ಸ್ಥಳದಲ್ಲಿ ಧರಿಸಿದವರಿಗೆ 1,000 ಕ್ರೋನರ್ (ಸುಮಾರು 10,500 ರೂಪಾಯಿ) ದಂಡ ವಿಧಿಸಲು ಈ ಕಾನೂನು ಅವಕಾಶ ನೀಡುತ್ತದೆ.
ಕಾನೂನು ಉಲ್ಲಂಘನೆ ಪುನರಾವರ್ತನೆಯಾದರೆ ದಂಡದ ಮೊತ್ತ 10,000 ಕ್ರೋನರ್ (ಸುಮಾರು 1.05 ಲಕ್ಷ ರೂಪಾಹಿ)ಗೆ ಏರುವುದು.
Next Story





