ಮೈಸೂರು: ರೈಲ್ವೆ ಬೋಗಿಯಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಮೈಸೂರು,ಮೇ.31: ನಗರದ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾದ ರೈಲ್ವೆ ಬೋಗಿಯೊಂದರಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಅದೇ ಬೋಗಿಯಲ್ಲಿದ್ದ ವೈಯರ್ ನಿಂದ ರೈಲ್ವೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬೋಗಿಯೊಳಗೆ ಪ್ರವೇಶಿಸುವ ವೇಳೆ ಕೃತ್ಯ ಗಮನಕ್ಕೆ ಬಂದಿದ್ದು, ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ರೈಲ್ವೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ರವಾನಿಸಿದ್ದಾರೆ.
ವ್ಯಕ್ತಿಯು ಸುಮಾರು 45ರ ವಯೋಮಾನದ ಆಸುಪಾಸಿನವರಾಗಿದ್ದು, ಬೋಳು ತಲೆಯ ಈ ವ್ಯಕ್ತಿಯು ಕಂದು ಬಣ್ಣದ ಪ್ಯಾಂಟ್ ಮತ್ತು ಬಿಳಿಯ ಶರ್ಟ್ ಧರಿಸಿದ್ದಾರೆ. ಇನ್ನಷ್ಟು ಮಾಹಿತಿ ತನಿಖೆಯಿಂದಷ್ಟೇ ಬಹಿರಂಗಗೊಳ್ಳಬೇಕಿದೆ.
Next Story





