'ಚರ್ಚ್ ದಾಳಿ' ವದಂತಿ ಹಬ್ಬಿಸಿದ ಆರೋಪ: ಇಬ್ಬರ ಬಂಧನ

ಮಂಗಳೂರು, ಮೇ 31: ಮಂಗಳೂರಿನಲ್ಲಿ ಚರ್ಚ್ ದಾಳಿ ನಡೆದಿದೆ ಎಂದು ಸಾಮಾಜಿಕ ಜಾಲ ತಾಣ ವಾಟ್ಸ್‌ಆ್ಯಪ್‌ನಲ್ಲಿ ವದಂತಿ ಹರಡಿಸಿದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಗುಡ್ಡಿಕೆರೆ ನಿವಾಸಿಗಳಾದ ಸುನಿಲ್ ವೇಗಾಸ್ (34) ಮತ್ತು ಸಚಿತ್ ಪಿ.ಪಿ. (23) ಬಂಧಿತ ಆರೋಪಿಗಳು.
ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದೆ.
Next Story





