ಪಡುಬಿದ್ರೆ : ಮನೆಗಳ ಕಸ ಸಂಗ್ರಹ ಸ್ಥಗಿತ

ಪಡುಬಿದ್ರೆ, ಜೂ. 1 : ಪಡುಬಿದ್ರೆ ಗ್ರಾಮ ಪಂಚಾಯ್ತಿಯಲ್ಲಿ ಮನೆಯಿಂದ ಕಸ ಸಂಗ್ರಹವನ್ನು ದಿಢೀರನೆ ಸ್ಥಗಿತಗೊಂಡಿದೆ.
ಗ್ರಾಮ ಪಂಚಾಯ್ತಿಯಿಂದ ತ್ಯಾಜ್ಯ ಸುರಿಯಲು ಸೂಕ್ತ ಸ್ಥಳಾವಕಾಶದ ಕೊರತೆಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ. ಪಡುಬಿದ್ರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ಮನೆಗಳಿಂದ ಸಣ್ಣ ಟೆಂಪೋದಲ್ಲಿ ಕಸವನ್ನು ಸಂಗ್ರಹಿಸಿ ಮಾರ್ಕೆಟ್ ಬಳಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಸುರಿಯಲಾಗುತಿತ್ತು. ಆದರೆ ಅಲ್ಲಿ ತ್ಯಾಜ್ಯ ಸುರಿಯುತಿರುವುದರಿಂದ ದುರ್ವಾಸನೆ ಉಂಟಾಗುತಿತ್ತು. ಈ ಭಾಗದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ಸರ್ಕಾರಿ ಬಾಲಕರ ವಸತಿ ನಿಲಯ ಸಹಿತ ಜನವಸತಿ ಪ್ರದೇಶವಾಗಿತ್ತು. ತ್ಯಾಜ್ಯ ಸುರಿಯುತಿರುವುದರಿಂದ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಸೂಕ್ತ ಸ್ಥಳಾವಕಾಶದ ಕೊರತೆಯಿಂದ ತ್ಯಾಜ್ಯವನ್ನು ಗ್ರಾಮ ಪಂಚಾಯ್ತಿ ಮುಂಭಾಗದಲ್ಲಿ ಹೊಂಡ ಅಗೆದು ತಂದು ಸುರಿಯಲಾಗುತ್ತಿದೆ. ಇದುವರೆಗೆ ಮನೆಗಳಿಂದ ಕಸ ಸಂಗ್ರಹಿಸಿತಿದ್ದು, ಇನ್ನು ಸ್ಥಳಗಿತಗೊಳ್ಳಲಿದೆ.
ನಮಗೆ ತ್ಯಾಜ್ಯ ಸುರಿಯಲು ಸೂಕ್ತ ಸ್ಥಳಾವಕಾಶದ ಕೊರತೆ ಇದೆ. ಆದೂದರಿಂದ ಮನೆಗಳಿಂದ ಇದುವರೆಗೆ ಕಸ ಸಂಗ್ರಹಿಸಲಾಗುತಿದ್ದು, ಇನ್ನು ಮುಂದೆ ಅದನ್ನು ಸ್ಥಗಿತಗೊಳಿಸಲಾಗುವುದು ಎಂದು ಪಿಡಿಓ ಪಂಚಾಕ್ಷರಿ ಕೇರಿಮಠ್ ತಿಳಿಸಿದ್ದಾರೆ.
ನಾನು ಇದರ ಬದಿಯಲ್ಲಿಯೇ ಬುಕ್ ಸ್ಟೋರ್ ವ್ಯವಹಾರ ಮಾಡುತಿದ್ದೇನೆ. ಇಂದು ಬೆಳಗ್ಗೆಯಿಂದ ದುರ್ವಾಸನೆ ಬೀರಿದ ಪರಿಣಾಮ ಶಾಲಾ ಮಕ್ಕಳು ಅಂಗಡಿಗೆ ಬರಲು ಹೆದರುತ್ತಾರೆ. ಜನನಿಭಿಡ ಪ್ರದೇಶದಲ್ಲಿ ಈ ರೀತಿ ಕೋಳಿ, ಮಾಂಸ ಮಾರುಕಟ್ಟೆ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಖಂಡಿತ ಮುಂದಿನ ದಿನಗಳಲ್ಲಿ ಪಡುಬಿದ್ರೆ ಪರಿಸರದಲ್ಲಿ ಹೊಸ ಖಾಯಿಲೆ ಹರಡುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಪದ್ಮನಾಭ ರಾವ್ ಎನ್ನುತ್ತಾರೆ.







