ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿಯ ಸೆರೆ
ಮಂಗಳೂರು, ಜೂ.1: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿ ಆತನಿಂದ ಬೈಕ್ ಸಹಿತ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯ ಉಪ್ಪಳದ ಮಂಗಲ್ಪಾಡಿ ಸಮೀಪದ ಮುಳಿಂಜ ನಿವಾಸಿ ಅಬೂಬಕರ್ ಸಿದ್ದೀಕ್ (32) ಬಂಧಿತ ಆರೋಪಿ. ಗುರುವಾರ ಈತ ತನ್ನ ಬೈಕ್‌ನಲ್ಲಿ ತಲಪಾಡಿ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಕೆ.ಆರ್. ಮತ್ತು ಎಸ್ಸೈಗಳಾದ ವಿನಾಯಕ ತೋರಗಲ್, ಗುರಪ್ಪಕಾಂತಿ ದಾಳಿ ಮಾಡಿ ಆರೋಪಿಯನ್ನು ಪತ್ತೆ ಹಚ್ಚಿ ಆತನ ವಶದಲ್ಲಿದ್ದ 1.50 ಕೆಜಿ ತೂಕದ ಗಾಂಜಾ ಮತ್ತು ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯಿಂದ ವಶಪಡಿಸಿಕೊಂಡ ಸೊತ್ತಿನ ಮೌಲ್ಯ 20,500 ರೂ. ಎಂದು ಅಂದಾಜಿಸಲಾಗಿದೆ. ಕಾರ್ಯಚಾರಣೆಯಲ್ಲಿ ಎಎಸ್‌ಐ ರಾಧಾಕೃಷ್ಣ, ಮೋಹನ್ ಕೆ.ವಿ. ಸಿಎಚ್‌ಸಿಗಳಾದ ರಾಜಾರಾಮ, ಶರೀಫ್, ಪೊಲೀಸರಾದ ರಂಜಿತ್, ಬಸವರಾಜ ಚಿಂಚೋಳಿ, ಸೋಮಶೇಖರ, ವಾಸುದೇವ ಪಾಲ್ಗೊಂಡಿದ್ದರು.
Next Story





