ಜೂ.2ರಂದು ಬೀಡಿ ಕಾರ್ಮಿಕರ ಧರಣಿ
ಉಡುಪಿ, ಜೂ.1: ಬೀಡಿ ಕಾರ್ಮಿಕರ ಹೆಚ್ಚಾದ ಬಾಕಿ ತುಟ್ಟಿಭತ್ಯೆ ಹಾಗೂ ಕನಿಷ್ಠ ಕೂಲಿ 21000 ರೂ. ನೀಡಬೇಕೆಂದು ಒತ್ತಾಯಿಸಿ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕ ಫೇಡರೇಶನ್ ವತಿಯಿಂದ ಜೂ.2ರಂದು ಬೆಳಗ್ಗೆ 11:30ಕ್ಕೆ ನಗರದ ಭಾರತ್ ಬೀಡಿ ಕಂಪೆನಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಇದಕ್ಕೂ ಮೊದಲು ಬೆಳಗ್ಗೆ 11 ಗಂಟೆಗೆ ಬೀಡಿ ಕಾರ್ಮಿಕರು ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಮೆರವಣಿಗೆ ನಡೆಸಲಿರುವರು ಎಂದು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕ ಫೆಡರೇಶನ್ ಮುಖಂಡ ಕವಿರಾಜ್ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





