ಮನೆಗೆ ನುಗ್ಗಿ 8.50ಲಕ್ಷ ರೂ. ಮೌಲ್ಯದ ನಗನಗದು ಕಳವು
ಮಣಿಪಾಲ, ಜೂ.1: ಮಣ್ಣಪಳ್ಳ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಬಗ್ಗೆ ವರದಿ ಯಾಗಿದೆ.
ದಿನೇಶ ಬಿ.ಶೆಟ್ಟಿ ಎಂಬವರು ಮೇ 22ರಂದು ಕುಟುಂಬ ಸಹಿತ ಯುರೋಪ್ ದೇಶದ ಪ್ರವಾಸಕ್ಕೆ ತೆರಳಿದ್ದು, ಈ ಮನೆಯನ್ನು ನೋಡಿಕೊಳ್ಳುತ್ತಿದ್ದ ಸಚಿನ್ ಶೆಟ್ಟಿ ಎಂಬವರು ಜೂ.1ರಂದು ಬೆಳಗ್ಗೆ ಮನೆಗೆ ಬಂದಾಗ ಈ ಕಳವು ಪ್ರಕರಣ ಬೆಳಕಿಗೆ ಬಂತೆನ್ನಲಾಗಿದೆ.
ಮನೆಯ ಹಿಂಬದಿಯ ಗ್ರಿಲ್ಗೆ ಹಾಕಿದ ಬೀಗ ಹಾಗೂ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ವಾರ್ಡೋಬ್ನ ಕಬ್ಬಿಣದ ಲಾಕರಿನಲ್ಲಿಟ್ಟಿದ್ದ ಸುಮಾರು 2,50,000ರೂ. ನಗದು ಹಾಗೂ ಸುಮಾರು 200 ಗ್ರಾಂ ತೂಕದ 6,00,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು. ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 8,50,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story