ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣ ಕಾರ್ಯಗಾರ

ಕೊಣಾಜೆ, ಜೂ. 1: ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸುವುದು ಹಾಗೂ ದಕ್ಷತೆ ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದು ದೇರಳಕಟ್ಟೆಯ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಹೇಳಿದರು.
ನಾಟೆಕಲ್‌ನ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ನಡೆದ ವೈದ್ಯಕೀಯ ಶಿಕ್ಷಣ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಗಾರದಿಂದ ಪರಸ್ಪರ ಜ್ಞಾನ ಹಂಚುವ ಕಾರ್ಯ ನಡೆಯುತ್ತದೆ. ಹಾಗೆಯೇ ತಮ್ಮ ಕ್ಷೇತ್ರದಲ್ಲಾಗುತ್ತಿರುವ ಆವಿಷ್ಕಾರ ಸಂಶೋಧನೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು, ವೈದ್ಯರು, ತಜ್ಞರು ಕಾರ್ಯಗಾರದಲ್ಲಿ ಪಾಲ್ಗೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಎಚ್.ಎಸ್. ವಿರೂಪಾಕ್ಷ, ವೈದ್ಯಕೀಯ ಅಧೀಕ್ಷಕ ಡಾ. ದೇವಿಪ್ರಸಾದ್ ಶೆಟ್ಟಿ, ಕೆಎಂಸಿಯ ಡಾ. ಅಣ್ಣಯ್ಯ ಕುಲಾಲ್, ಹಾಗೂ ಸಹಾಯಕ ಡೀನ್ ಡಾ. ಶ್ರೀಶ ಉಪಸ್ಥಿತರಿದ್ದರು.
ಕಾರ್ಯಗಾರ ಮುಖ್ಯ ಸಂಘಟನೆ ಕಾರ್ಯದರ್ಶಿ ಡಾ. ಶಕುಂತಲಾ ಆರ್.ರೈ ಸ್ವಾಗತಿಸಿದರು. ಕಾರ್ಯಕ್ರಮ ಸಂಘಟಕ ಡಾ. ರೋಶನ್ ಎಸ್ ವಂದಿಸಿದರು. ಡಾ. ವರ್ಷಾ ಶೆಣೈ ಹಾಗೂ ಡಾ. ಸಹನಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.





